ಚೆನ್ನೈ: ತಮಿಳು ನಟ ಮತ್ತು ಚರ್ಮರೋಗ ವೈದ್ಯ ಡಾ.ಸೇತುರಾಮನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾರ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಡಾ.ಸೇತುರಾಮನ್ ಅವರು ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಎಂದೇ ಖ್ಯಾತಿ ಪಡೆದಿದ್ದರು.
Advertisement
2013ರಲ್ಲಿ ಬಿಡುಗಡೆಯಾಗಿದ್ದ ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಮೂಲಕ ಡಾ.ಸೇತುರಾಮನ್ ಅವರು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಯಶಸ್ಸಿನ ನಂತರ, ಸೇತುರಾಮನ್ ಇನ್ನೂ ಮೂರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವಾಲಿಬ ರಾಜಾ’, ‘ಸಕ್ಕ ಪೊಡು ಪೊಡು ರಾಜ’ ಮತ್ತು ’50/50′ ಸಿನಿಮಾಗಳಲ್ಲಿ ನಟಿಸಿದ್ದಾರೆ.
Advertisement
Advertisement
ನಟನ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಡಾ.ಸೇತುರಾಮನ್ ಅವರು 2016 ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಇದೀಗ ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.
Advertisement
ಸೇತುರಾಮನ್ ಚೆನ್ನೈನಲ್ಲಿ ಕ್ಲಿನಿಕ್‍ನಲ್ಲಿ ಚರ್ಮರೋಗ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಸೇತು ಅವರು 36 ವರ್ಷದಲ್ಲೇ ಪಾರ್ಶ್ವವಾಯುವಿಗೆ ಒಳಗಾಗಿದ್ದು, 2017ರಲ್ಲಿ ಇವರಿಗೆ ಸರ್ಜರಿ ಕೂಡ ಆಗಿತ್ತು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕೊರೊನಾ ವೈರಸ್ ಸೋಂಕವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಾತನಾಡಿದ್ದು, ಮೊದಲಿಗೆ ಮನೆಯಲ್ಲಿಯೇ ಇದ್ದು ಕೊರೊನಾ ವೈರಸ್ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು.