ಸ್ಯಾಂಡಲ್ವುಡ್ನ (Sandalwood) ಹಿರಿಯ ನಟ ಅನಂತ್ ನಾಗ್ (Actor Ananth Nag) ಅವರು ರಾಜಕೀಯ ರಂಗಕ್ಕೆ ಮತ್ತೆ ಮುಖ ಮಾಡಿದ್ದರು. ಬಿಜೆಪಿ ಪಕ್ಷಕ್ಕೆ (Bjp) ಸಾಥ್ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಟ ಅನಂತ್ ನಾಗ್ ಗೈರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅನಂತ್ ನಾಗ್ (Ananth Nag) ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅನಂತ್ ನಾಗ್ ಅವರು (ಫೆ.22)ದಂದು ಸಂಜೆ ಬೆಂಗಳೂರಿನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಅನಂತ್ ನಾಗ್ ಬರಲಿಲ್ಲ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದರು. ಇನ್ನು ಅನಂತ್ ನಾಗ್ ಈಗ ಬರ್ತಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದು ಕಾದು ಕುಳಿತರು. ಕೊನೆ ಕ್ಷಣದಲ್ಲಿ ಅವರು ಪಕ್ಷ ಸೇರ್ಪಡೆಯನ್ನು ಕ್ಯಾನ್ಸಲ್ (Cancel) ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸೌರವ್ ಗಂಗೂಲಿ ಬಯೋಪಿಕ್ಗೆ ಹೀರೋ ಫಿಕ್ಸ್
ಈ ಹಿಂದೆ ಜನತದಳದಿಂದ ರಾಜಕೀಯಕ್ಕೆ ಎಂಟ್ರಿ ನೀಡಿದ್ದ ಅನಂತ್ ನಾಗ್ 2004ರ ಚುನಾವಣೆ (Election) ಬಳಿಕ ರಾಜಕೀಯದಿಂದ (Politics) ದೂರ ಉಳಿದರು. ಇದೀಗ ಬಿಜೆಪಿಗೆ ಸಾಥ್ ನೀಡೋದಕ್ಕೆ ಮುಂದಾಗಿದ್ದರು. ಅದರಂತೆ ಸಂಜೆ 4.30ಕ್ಕೆ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರಾಗಿರೋದು ಚರ್ಚೆಗೆ ಗ್ರಾಸವಾಗಿದೆ. ಕೊನೆಯ ಹಂತದಲ್ಲಿ ತಮ್ಮ ನಿರ್ಧಾರವನ್ನ ಬದಲಿಸಿದ್ರಾ? ಹಾಗಾಗಿ ಬಿಜೆಪಿ ಸೇರ್ಪಡೆಯಿಂದ ದೂರ ಉಳಿದರಾ ಎಂಬ ಪ್ರಶ್ನೆ ಮೂಡಿದೆ.
ಅಷ್ಟಕ್ಕೂ ನಟ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿರುವ ಅಸಲಿ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅನಂತ್ ನಾಗ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k