ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ಅಭಿಮಾನಿಗಳಿಗೆ ಕೈ ಮುಗಿದ ಅಂಬಿ ಪುತ್ರ ಅಭಿಷೇಕ್!

Public TV
1 Min Read
ABHISHEK copy

ಮಂಡ್ಯ: ತಮ್ಮ ತಂದೆಗೆ ತೋರಿದ ಪ್ರೀತಿ ಹಾಗೂ ಗೌರವಕ್ಕೆ ಅಂಬರೀಶ್ ಪುತ್ರ ಅಭಿಷೇಕ್ ಅಭಿಮಾನಿಗಳಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಯಾಂಡಲ್ ವುಡ್ ದಿಗ್ಗಜ ಅಂಬರೀಶ್ ಪ್ರಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆದೊಯ್ಯಲು ಸೇನಾ ಹೆಲಿಕಾಪ್ಟರ್ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಬಂದಿಳಿಯುತ್ತಿದ್ದಂತೆಯೇ ಪುತ್ರ ಅಭಿಷೇಕ್ ಅವರು ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.

Ambareesh 3

ಅಂಬರೀಶ್ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಮಂಡ್ಯ ಜಿಲ್ಲೆಯೇ ಕಣ್ಣೀರು ಹಾಕಿದ್ದು, ಅಂಬಿಯ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಹೀಗಾಗಿ ಯಾವುದೇ ಅನಾಹುತಗಳು ನಡೆಯದಂತೆ ಅತ್ಯಂತ ಗೌರವಪೂರ್ವಕವಾಗಿ ತಮ್ಮ ತಂದೆಯ ಅಂತಿಮ ದರ್ಶನ ಪಡೆದ ಎಲ್ಲಾ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.

ಕ್ರೀಡಾಂಗಣದಲ್ಲಿ ಕೈ ಮುಗಿದುಕೊಂಡು ಒಂದು ಸುತ್ತು ಬಂದು ಧನ್ಯವಾದ ಹೇಳುವ ಮೂಲಕ ಅಭಿಷೇಕ್ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಜೋರಾಗಿ ಕಿರುಚಿದ್ದಾರೆ. ಈ ಮೂಲಕ ಅಭಿಷೇಕ್ ಗೌರವಕ್ಕೆ ತಲೆಬಾಗಿದ್ದಾರೆ. ಅಭಿಷೇಕ್ ಜೊತೆ ಸುಮಲತಾ ಅವರು ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

AMBI ABHI

ಕೊನೆಯ ಭಾಗವಾಗಿ ಪತ್ನಿ ಸುಮಲತಾ ಮಣ್ಣನ್ನು ಅಂಬಿ ಬಾಯಿಗೆ ಒರೆಸಿದರು. ಇದೇ ಸಂದರ್ಭದಲ್ಲಿ ಮಂಡ್ಯದ ಗಂಡಿಗೆ ಮಂಡ್ಯದ ಮಣ್ಣಿನ ತಿಲಕವನ್ನು ಪುತ್ರ ಅಭಿಷೇಕ್ ಇಟ್ಟಿದ್ದಾರೆ.

9 ಗಂಟೆಗೆ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹೆಲಿಕಾಪ್ಟರ್ ಮೂಲಕ ಎಚ್‍ಎಎಲ್‍ಗೆ ಪಾರ್ಥಿವ ಶರೀರ ಹೊರಡಬೇಕಿತ್ತು. ಆದರೆ 1.50 ಗಂಟೆ ತಡವಾಗಿ ಅಂದರೆ 10.53ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರ ಹೊರಟಿತ್ತು.

https://www.youtube.com/watch?v=91ZMEP06vk0

https://www.youtube.com/watch?v=rBjVY_nGZDQ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *