‘ಪುಷ್ಪ 2′ (Pushpa 2) ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೃತ ರೇವತಿ ಪುತ್ರನನ್ನು ನೋಡಲು ಇಂದು (ಜ.7) ಕಿಮ್ಸ್ ಆಸ್ಪತ್ರೆಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ನಾನಿದ್ದೇನೆ ಎಂದು ಶ್ರೀತೇಜ ಕುಟುಂಬಸ್ಥರಿಗೆ ನಟ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
Advertisement
ಇಂದು ಬೆಳಗ್ಗೆ ಆಸ್ಪತ್ರೆಗೆ ಅಲ್ಲು ಅರ್ಜುನ್ (Allu Arjun) ಭೇಟಿ ನೀಡಿದ್ದು, ವೈದ್ಯರಲ್ಲಿ ಶ್ರೀತೇಜ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶ್ರೀತೇಜ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ನಿಮ್ಮ ಜೊತೆ ನಾವಿದ್ದೇವೆ ಎಂದು ನಟ ಭರವಸೆ ನೀಡಿದ್ದಾರೆ. ಆ ನಂತರ ಆಸ್ಪತ್ರೆಯಿಂದ ಅಲ್ಲು ಅರ್ಜುನ್ ತೆರಳಿದ್ದಾರೆ.
Advertisement
Advertisement
ಅಂದಹಾಗೆ, ಡಿ.4ರಂದು ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಆಗ ನಡೆದ ಕಾಲ್ತುಳಿತದಲ್ಲಿ ರೇವತಿ ಸಾವನ್ನಪ್ಪಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ 35 ದಿನಗಳಿಂದ ಶ್ರೀತೇಜಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಈಗಾಗಲೇ ಮೃತ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರವನ್ನು ನೀಡೋದಾಗಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಘೋಷಿಸಿದ್ದಾರೆ.
Advertisement
ಇನ್ನೂ ‘ಪುಷ್ಪ 2’ ಕಾಲ್ತುಳಿತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ರನ್ನು ಡಿ.13ರಂದು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ಗೆ ಜ.3ರಂದು ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ನಟ ಬೇಲ್‌ನಲ್ಲಿದ್ದಾರೆ.