‘ಪುಷ್ಪ 2′ (Pushpa 2) ವಿವಾದದ ನಡುವೆ ಹೊಸ ಪ್ರಾಜೆಕ್ಟ್‌ನತ್ತ ಅಲ್ಲು ಅರ್ಜುನ್ ಮುಖ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಕಚೇರಿಯಲ್ಲಿ ಅಲ್ಲು ಅರ್ಜುನ್ (Allu Arjun) ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಟ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೋರ್ಟ್‌ನಲ್ಲಿ ಪವಿತ್ರಾ ಭಾವುಕ – ಬೆನ್ನುತಟ್ಟಿ ಸಂತೈಸಿದ ದರ್ಶನ್
Advertisement
‘ಪುಷ್ಪ 2’ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್‌ಗೆ ರೆಗ್ಯೂಲರ್ ಬೇಲ್ ಸಿಕ್ಕಿದೆ. ಇದರ ವಿವಾದದ ನಡುವೆ ಹೊಸ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇಬ್ಬರ ಕಡೆಯಿಂದಲೂ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.
Advertisement
View this post on Instagram
Advertisement
ನಿನ್ನೆ (ಜ.9) ಅಲ್ಲು ಅರ್ಜುನ್ ಮುಂಬೈಗೆ ಆಗಮಿಸಿದ್ದರು. ಈ ವೇಳೆ, ಅವರು ಬನ್ಸಾಲಿ ಕಚೇರಿಯಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಈ ಹಿಂದೆ ಹರಿದಾಡುತ್ತಿದ್ದ ಸಿನಿಮಾ ಸುದ್ದಿಗೆ ಇದೀಗ ಪುಷ್ಠಿ ಸಿಕ್ಕಿದೆ. ಸದ್ಯ ಹರಿದಾಡುತ್ತಿರುವ ಸುದ್ದಿ ನಿಜನಾ? ಇಬ್ಬರ ಕಡೆಯಿಂದ ಸಿನಿಮಾ ಕುರಿತು ಗುಡ್ ನ್ಯೂಸ್ ಸಿಗುತ್ತಾ ಎಂದು ಕಾಯಬೇಕಿದೆ.
Advertisement
View this post on Instagram
ಇನ್ನೂ ಡಿ.5ರಂದು ರಿಲೀಸ್ ಆದ ‘ಪುಷ್ಪ 2’ ಸಿನಿಮಾ ಗೆಲ್ಲಾಪೆಟ್ಟಿಗೆಯಲ್ಲಿ 1800 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನಗ್ಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್ ಪೊನ್ನಪ್ಪ ಸೇರಿದಂತೆ ಅನೇಕರು ನಟಿಸಿದ್ದಾರೆ.