ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

Public TV
1 Min Read
allu arha

ಆರ್‌ಆರ್‌ಆರ್’ (RRR) ಸಿನಿಮಾದ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ ಅವರು ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಂದೂ ಮಾಡಿರದ ಡಿಫರೆಂಟ್ ರೋಲ್‌ನಲ್ಲಿ ತಾರಕ್ ಕಾಣಿಸಿಕೊಳ್ತಿದ್ದಾರೆ. ಹೀಗಿರುವಾಗ ‘ದೇವರ’ (Devara) ಸಿನಿಮಾಗೆ ಸ್ಟಾರ್ ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ (Allu arha) ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಮಗುವಿನ ತಂದೆ ಯಾರೆಂದು ಗುಟ್ಟು ಬಿಟ್ಟು ಕೊಟ್ಟ ಇಲಿಯಾನಾ

jr.ntr

ರಾಜಮೌಳಿ ನಿರ್ದೇಶನದ ಸಿನಿಮಾ ‘ಆರ್‌ಆರ್‌ಆರ್’ ಚಿತ್ರದ ಯಶಸ್ಸಿನ ನಂತರ ತಾರಕ್ ‘ದೇವರ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ನಾಯಕಿಯಾಗಿ ಜಾನ್ವಿ ಕಪೂರ್ ಸಾಥ್ ನೀಡಿದ್ರೆ, ವಿಲನ್ ಆಗಿ ಸೈಫ್ ಅಲಿ ಖಾನ್ (Saif Ali Khan) ಅಬ್ಬರಿಸುತ್ತಿದ್ದಾರೆ. ಸೈಫ್‌ಗೆ ಪತ್ನಿಯಾಗಿ ಕನ್ನಡದ ನಟಿ ಚೈತ್ರಾ ರೈ (Chaithra Rai) ನಟಿಸುತ್ತಿದ್ದಾರೆ.

allu arha 1

‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಅವರು ಡಬಲ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ. ತಾರಕ್ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅರ್ಹಾಗೆ ನಟನೆಗೆ ಅವಕಾಶ ಕಮ್ಮಿ ಇದ್ರೂ ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಹಾಗಾಗಿ ಸಿನಿಮಾಗೆ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರಂತೆ. 2-3 ದಿನಗಳ ಕಾಲ ಶೂಟಿಂಗ್‌ಗೆ 20 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಮಂತಾ (Samantha) ನಟನೆಯ ‘ಶಾಕುಂತಲಂ’ ಸಿನಿಮಾಗೂ ಅರ್ಹಾ ಪಾತ್ರಕ್ಕೆ ದುಬಾರಿ ಸಂಭಾವನೆ ಪಡೆದಿದ್ದರು. ಸಮಂತಾ ಮಗನಾಗಿ ಅರ್ಹಾ ನಟಿಸಿದ್ದರು.

ಕ್ಯಾಮೆರಾ ಅಂದರೆ ಹೆಚ್ಚು ಅಲ್ಲು ಅರ್ಹಾ ಆಕ್ಟಿಂಗ್ ಒಲವಿದೆ. ಸದ್ಯ ‘ದೇವರ’ ಸಿನಿಮಾ ವಿಚಾರವಾಗಿ ಅಲ್ಲು ಅರ್ಜುನ್ (Allu Arjun) ಪುತ್ರಿ, ಅರ್ಹಾ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾದ ಭಾಗವಾಗಿರೋದು ನಿಜಾನಾ ಅಂತಾ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

Share This Article