ಕನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಸೊಂಟ ಬಳುಕಿಸಿರುವ ವಿಚಾರ ಈಗಾಗಲೇ ರಿವೀಲ್ ಆಗಿದೆ. ಆದರೆ ಈ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ (Allu Arjun) ಜೊತೆಗಿನ ಶ್ರೀಲೀಲಾ (Sreeleela) ಐಟಂ ಸಾಂಗ್ ರಿಲೀಸ್ ಆಗಲಿರುವ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಇದನ್ನೂ ಓದಿ:ರಿಲೇಷನ್‌ಶಿಪ್‌ನಲ್ಲಿರೋದಾಗಿ ಒಪ್ಪಿಕೊಂಡ ವಿಜಯ್ ದೇವರಕೊಂಡ
ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಜೋಡಿ ‘ಕಿಸ್ಸಿಕ್’ ಎಂಬ ಹಾಡಿಗೆ ಈಗಾಗಲೇ ಹೆಜ್ಜೆ ಹಾಕಿದ್ದಾರೆ. ನ.24ರಂದು ಸಂಜೆ 7: 02ಕ್ಕೆ ಈ ಸಾಂಗ್ ರಿಲೀಸ್ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಚಿತ್ರತಂಡ ರಿವೀಲ್ ಮಾಡಿರುವ ಶ್ರೀಲೀಲಾ ಪೋಸ್ಟರ್‌ನಿಂದ ಹಾಡಿನ ಕುರಿತು ನಿರೀಕ್ಷೆ ಹೆಚ್ಚಿಸಿದೆ. ‘ಕಿಸ್ಸಿಕ್’ ಹಾಡಿಗಾಗಿ ಪಡ್ಡೆಹುಡುಗರು ಎದುರು ನೋಡುತ್ತಿದ್ದಾರೆ.
View this post on Instagram
ಅಂದಹಾಗೆ, ಡಿ.5ಕ್ಕೆ ‘ಪುಷ್ಪ 2’ ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ.