ಅರಬ್ಬರ ನೆಲದಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ (Narendra Modi) ಮೋದಿ ಅವರು ಇಂದು (ಫೆ.14) ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar), ವಿವೇಕ್ ಒಬೆರಾಯ್, ದಿಲೀಪ್ ಜೋಶಿ, ಸಿಂಗರ್ ಶಂಕರ್ ಮಹಾದೇವನ್ ಭಾಗಿಯಾಗಿದ್ದಾರೆ.
Advertisement
ಅಬುಧಾಬಿಯ ಹಿಂದೂ ದೇವಾಲಯದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿರುವುದ್ದಕ್ಕೆ ಅಕ್ಷಯ್ ಕುಮಾರ್ ಮತ್ತು ವಿವೇಕ್ ಒಬೆರಾಯ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಸುಂದರವಾದ ದೇವಾಲಯವಾಗಿದ್ದು, ಇಂದು ದೇವರ ಸೇವೆ ಮಾಡುವ ಸೌಭಾಗ್ಯ ನನಗಿತ್ತು ಎಂದು ವಿವೇಕ್ ಒಬೆರಾಯ್ (Vivek Oberoi) ಮಾತನಾಡಿದ್ದಾರೆ.
Advertisement
#WATCH | Abu Dhabi: Actor Vivek Oberoi says, “It is incredible and inspirational…The most beautiful thing was when PM Modi said that he worships Maa Bharti. It is a historic & important day. We are humbled & honoured to be a part of it” pic.twitter.com/B7aKTNJCej
— ANI (@ANI) February 14, 2024
Advertisement
ಅಂದಹಾಗೆ, ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಬೋಚಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಹಿಂದೂ ದೇವಾಲಯವನ್ನು ಮೋದಿ (Narendra Modi) ಫೆ.14ರ ಸಂಜೆ ಉದ್ಘಾಟಿಸಿದರು.
Advertisement
ದೇವಾಲಯ ಉದ್ಘಾಟನೆಗೂ ಮುನ್ನ ಮಂದಿರದ ಹೊರಗಡೆ ಕಲ್ಯಾಣಿಗೆ ಗಂಗಾ ಪೂಜೆ ಕಾರ್ಯವನ್ನು ಮೋದಿ ನೆರವೇರಿಸಿದರು. ನಂತರ ಪ್ರವೇಶದ್ವಾರದಲ್ಲಿ ಟೇಪ್ ಕತ್ತರಿಸುವ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಈಶ್ವರಚರಣದಾಸ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಸಾಥ್ ನೀಡಿದರು. ಈ ವೇಳೆ ಸ್ವಾಮೀಜಿಗಳು ಭವ್ಯ ಮಂದಿರದ ರಚನೆ ಕುರಿತು ಮೋದಿ ಅವರಿಗೆ ಮಾಹಿತಿ ನೀಡಿದರು.
ನಂತರ ದೇವಾಲಯದಲ್ಲಿ ಮೋದಿ ಆರತಿ ಬೆಳಗಿದರು. ಮಂದಿರದ ದೇವರಿಗೆ ಪುಷ್ಪವನ್ನು ಅರ್ಪಿಸಿ ಪ್ರಾರ್ಥಿಸಿದರು. 27 ಎಕರೆ ಜಾಗದಲ್ಲಿ 900 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ.