ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಮುಂಬೈನಲ್ಲಿರುವ ಎರಡು ಅಪಾರ್ಟ್‌ಮೆಂಟ್ ಅನ್ನು ದುಬಾರಿ ಮೊತ್ತಕ್ಕೆ ಸೇಲ್ ಮಾಡಿದ್ದಾರೆ. 3.5 ಕೋಟಿ ರೂ.ಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್ ಅನ್ನು 6.6 ಕೋಟಿ ರೂ.ಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.
ಮುಂಬೈನಲ್ಲಿ ಬೊರಿವಲಿಯಲ್ಲಿ ಎರಡು ಅಪಾರ್ಟ್‌ಮೆಂಟ್ ಅನ್ನು ಮಾರಾಟ ಮಾಡುವ ಮೂಲಕ 6.6 ಕೋಟಿ ರೂ. ಗಳಿಸಿದ್ದಾರೆ. ಇವುಗಳಲ್ಲಿ ಒಂದು 5.35 ಕೋಟಿ ರೂ.ಗೆ ಮಾರಾಟವಾಗಿದೆ. ಮತ್ತೊಂದು 1.25 ಕೋಟಿ ರೂ.ಗೆ ಸೇಲ್ ಆಗಿದೆ. ಇದನ್ನೂ ಓದಿ:’ಸಿಕಂದರ್’ ಚಿತ್ರದ ಟ್ರೈಲರ್‌ನಲ್ಲಿ ಮಿಂಚಿದ ಕನ್ನಡಿಗ ಕಿಶೋರ್
ಮೂಲಗಳ ಪ್ರಕಾರ, 5.35 ಕೋಟಿ ರೂ.ಗೆ ಮಾರಾಟವಾಗಿರೋ ಅಪಾರ್ಟ್‌ಮೆಂಟ್ ಅನ್ನು 2017ರ ನವೆಂಬರ್‌ನಲ್ಲಿ 2.82 ಕೋಟಿ ರೂ.ಗೆ ಖರೀದಿಸಿದ್ದರು ಅಕ್ಷಯ್. ಈಗ ಅದರ ಬೆಲೆ 89%ರಷ್ಟು ಹೆಚ್ಚಾಗಿದೆ. ಈ ಅಪಾರ್ಟ್‌ಮೆಂಟ್ 1,080 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 32.1 ಲಕ್ಷ ರೂ. ಮತ್ತು ನೋಂದಣಿ ಶುಲ್ಕ 30,000 ರೂ. ಆಗಿದೆ.
ಮತ್ತೊಂದು ಅಪಾರ್ಟ್‌ಮೆಂಟ್ 1.25 ಕೋಟಿ ರೂ.ಗೆ ಮಾರಾಟ ಆಗಿದೆ. 2017ರಲ್ಲಿ ಇದನ್ನು 67.19 ಲಕ್ಷ ರೂ.ಗೆ ಖರೀದಿಸಲಾಗಿದೆ. ಈ ಅಪಾರ್ಟ್‌ಮೆಂಟ್ 252 ಚದರ ಅಡಿ ಹೊಂದಿದೆ. ಇದರ ಮುದ್ರಾಂಕ ಶುಲ್ಕ 7.5 ಲಕ್ಷ ರೂ. ಮತ್ತು ನೋಂದಣಿ ಶುಲ್ಕ 30,000 ರೂ. ಆಗಿದೆ.