ಬಾಲಿವುಡ್ ಬ್ಯೂಟಿ ರವೀನಾ ಟಂಡನ್ (Raveena Tandon)- ಅಕ್ಷಯ್ ಕುಮಾರ್ (Akshay Kumar) ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿದ್ದರು ಎಂಬ ವಿಚಾರ ಎಲ್ಲರಿಗೂ ಗೊತ್ತೆಯಿದೆ. ಬ್ರೇಕಪ್ ಬಳಿಕ ಹೊಸ ಸಂಗಾತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ 20 ವರ್ಷಗಳ ನಂತರ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಹೊಸ ಚಿತ್ರಕ್ಕೆ ರವೀನಾ- ಅಕ್ಷಯ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
ವೆಲಕಮ್ ಪಾರ್ಟ್ 1 ಮತ್ತು 2 ಸಿನಿಮಾ, ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ವೆಲಕಮ್ ಪಾರ್ಟ್ 3 (Welcome 3) ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಗಳಾಗಿ ಅಕ್ಷಯ್ ಕುಮಾರ್- ರವೀನಾ ಟಂಡನ್ ನಟಿಸಲು ಓಕೆ ಎಂದಿದ್ದಾರೆ. ಬಾಲಿವುಡ್ ಬೆಸ್ಟ್ ಜೋಡಿ ಇದೀಗ 20 ವರ್ಷಗಳ ಬಳಿಕ ಈ ಚಿತ್ರಕ್ಕಾಗಿ ಒಂದಾಗುತ್ತಿದೆ.
Advertisement
Advertisement
ಹೊಸ ಬಗೆಯ ಕಥೆಯಲ್ಲಿ ಅಕ್ಷಯ್- ರವೀನಾ ಡ್ಯುಯೇಟ್ ಹಾಡಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಚಿತ್ರತಂಡಕ್ಕೆ ಯಾರೆಲ್ಲಾ ಕಲಾವಿದರು ಸಾಥ್ ಕೊಡುತ್ತಾರೆ ಎಂಬುದರ ಅಪ್‌ಡೇಟ್ ಕೂಡ ಸಿಗಲಿದೆ. ಇದನ್ನೂ ಓದಿ:ತಾನ್ಯ ಹೋಪ್-ಸಂತಾನಂ ನಟನೆಯ ‘ಕಿಕ್’ ಚಿತ್ರದ ಗಿಲ್ಮಾ ಸಾಂಗ್ ರಿಲೀಸ್
Advertisement
ತೆರೆ ಮೇಲೆ ಬೆಸ್ಟ್ ಜೋಡಿಗಳಾಗಿ ರವೀನಾ ಟಂಡನ್- ಅಕ್ಷಯ್ ಕುಮಾರ್ ಮಿಂಚಿದ್ದರು. ರಿಯಲ್ ಲೈಫ್‌ನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸು ಕಂಡಿದ್ದರು. ಇಬ್ಬರ ನಿಶ್ಚಿತಾರ್ಥದ ಬಳಿಕ ವೈಯಕ್ತಿಕ ಕಾರಣಗಳಿಂದ ಬ್ರೇಕಪ್ ಮಾಡಿಕೊಂಡಿದ್ದರು. ರವೀನಾ ಜೊತೆಗಿನ ಬ್ರೇಕಪ್ ನಂತರ ಶಿಲ್ಪಾ ಶೆಟ್ಟಿ ಜೊತೆ ಅಕ್ಷಯ್ ಎಂಗೇಜ್ ಆಗಿದ್ರು. ಅದ್ಯಾಕೋ ಈ ಸಂಬಂಧ ಕೂಡ ಕೂಡಿ ಬರಲಿಲ್ಲ. ನಂತರ ಟ್ವಿಂಕಲ್ ಖನ್ನಾ(Twinkle Khanna) ಜೊತೆ ಅಕ್ಷಯ್ ಮದುವೆಯಾದರು. ನಿರ್ಮಾಪಕ ಅನಿಲ್ ಜೊತೆ ರವೀನಾ ಹೊಸ ಬಾಳಿಗೆ ಕಾಲಿಟ್ಟರು.
ಆದರೆ ಈಗ 20 ವರ್ಷಗಳ ಹಿಂದಿನ ಮುನಿಸು ಮರೆತು ಅಕ್ಷಯ್- ರವೀನಾ ಫ್ರೆಂಡ್ಸ್ ಆಗಿದ್ದಾರೆ. ತೆರೆಯ ಮೇಲೆ ಈ ಜೋಡಿ ಮತ್ತೆ ಯಾವ ರೀತಿ ಮೋಡಿ ಮಾಡಲಿದೆ ಕಾಯಬೇಕಿದೆ.