‘ಲೈಗರ್’ (Liger) ನಟಿ ಅನನ್ಯಾ ಪಾಂಡೆ (Ananya Panday) ಮತ್ತು ಆದಿತ್ಯ ರಾಯ್ ಕಪೂರ್ (Aditya Roy Kapoor) ನಡುವೆ ಡೇಟಿಂಗ್ ವದಂತಿಗಳು ಹೊಸದೇನಲ್ಲ. ಆದರೆ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆದಿತ್ಯ ರಾಯ್ ಕಪೂರ್ ಅವರು ಸಾರಾ ಅಲಿ ಖಾನ್ (Sara Ali Khan) ಅವರೊಂದಿಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾರ್ಟಿಯ ಹಲವು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
- Advertisement -
ವೈರಲ್ ಆದ ಫೋಟೋದಲ್ಲಿ ಆದಿತ್ಯ ಮತ್ತು ಸಾರಾ ಅವರು ನಿರ್ಮಾಪಕ ಅನುರಾಗ್ ಬಸು ಅವರೊಂದಿಗೆ ಸಮಯವನ್ನು ಕಳೆಯುತ್ತಿರುವುದು ಕಾಣಬಹುದು. ‘ಮೆಟ್ರೋ ಇನ್ ಡಿನೋ’ ಸಿನಿಮಾ ಸೆಟ್‌ನಲ್ಲಿ ಆಯೋಜಿಸಲಾದ ನಿರ್ದೇಶಕರ ಹುಟ್ಟುಹಬ್ಬದ ಸಂದರ್ಭದ ಫೋಟೋಗಳಿವು ಎನ್ನಲಾಗುತ್ತಿದೆ. ಆದಿತ್ಯ ಮತ್ತು ಸಾರಾ ಚಿತ್ರಗಳಲ್ಲಿ ಪರಸ್ಪರ ಹತ್ತಿರವಾಗಿ ನಿಂತಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಹಾರಿದ ಕನ್ನಡತಿ- ಡೈರೆಕ್ಟರ್ ವಿಕ್ರಮ್ ಭಟ್ ಸಿನಿಮಾದಲ್ಲಿ ಶ್ರುತಿ ಪ್ರಕಾಶ್
- Advertisement -
Sara and Adi celebrating Anurag Basu's birthday on sets ❤️#SaraAliKhan #AdityaRoyKapur #AnuragBasu pic.twitter.com/Ap7YbNilq3
— Saniya (@Sara__kingdom_) May 8, 2024
- Advertisement -
ಅಂದಹಾಗೆ, ಅನನ್ಯಾ ಮತ್ತು ಆದಿತ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವದಂತಿ 2022ರಲ್ಲಿ ಶುರುವಾಗಿತ್ತು. 2022ರಲ್ಲಿ ಕೃತಿ ಸನೂನ್ ಅವರ ದೀಪಾವಳಿ ಪಾರ್ಟಿಯಲ್ಲಿ ಜೋಡಿ ಕಾಣಿಸಿಕೊಂಡಾಗ ವದಂತಿ ಸುದ್ದಿಗಳು ಮತ್ತಷ್ಟು ಹೆಚ್ಚಾಯ್ತು. ಅಂಬಾನಿ ಮನೆ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿಯೂ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.
- Advertisement -
ಕಾರ್ತಿಕ್ ಆರ್ಯನ್ (Sara Ali Khan) ಜೊತೆ ಸಾರಾ ಬ್ರೇಕಪ್ ಮಾಡಿಕೊಂಡು ಸಿಂಗಲ್ ಲೈಫ್ ಲೀಡ್ ಮಾಡುತ್ತಾ ಇದ್ದರು. ಅನನ್ಯಾ ಪ್ರೀತಿಗೆ ಗುಡ್ ಬೈ ಹೇಳಿರೋ ಆದಿತ್ಯಾ ಇದೀಗ ಸಾರಾ ಜೊತೆ ಹೊಸ ಪ್ರೇಮ ಕಹಾನಿ ಶುರು ಮಾಡುತ್ತಾರಾ? ಎಂದು ಕಾದುನೋಡಬೇಕಿದೆ.