ಶಬರಿಮಲೆಗೆ ಮಹಿಳೆಯರ ಪ್ರವೇಶ- ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಹುಲ್ ಈಶ್ವರ್ ಬಂಧನ

Public TV
1 Min Read
Rahul Easwar

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ಈಶ್ವರ್ ವಿವಾದಾತ್ಮಕ ಹೇಳಿಕೆ ಕುರಿತು ಕೊಚ್ಚಿ ನಿವಾಸಿ ಪ್ರಮೋದ್ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ರಾಹುಲ್ ಈಶ್ವರ್ ಅವರನ್ನು ಬಂಧಿಸಲಾಗಿದೆ. ನಾನು ಈ ರೀತಿ ಹೇಳಿಕೆ ನೀಡಿಲ್ಲ ಎಂದು ರಾಹುಲ್ ಈಶ್ವರ್ ಹೇಳುತ್ತಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆಯ ವಿಡಿಯೋ ಹರಿದಾಡುತ್ತಿದೆ.

Shabarimala images 1

ರಾಹುಲ್ ಈಶ್ವರ್ ಹೇಳಿದ್ದೇನು?:
ಒಂದು ವೇಳೆ ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದರೆ ಕೈಗೆ ಗಾಯ ಮಾಡಿಕೊಂಡು, ರಕ್ತದ ಹನಿ ಬೀಳುವಂತೆ ಮಾಡಬೇಕು. ಇದರಿಂದಾಗಿ ಅರ್ಚಕರು ಶಬರಿಮಲೆ ದೇಗುಲದ ಬಾಗಿಲು ಮುಚ್ಚುತ್ತಾರೆ ಎಂದು ಸುದ್ದಿಗೋಷ್ಠಿ ವೇಳೆ ರಾಹುಲ್ ಈಶ್ವರ್ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ್ದರು. ಇದನ್ನೂ ಓದಿ: ಶಬರಿಮಲೆ ಪ್ರತಿಭಟನೆಯಿಂದ ಹುಂಡಿ ಆದಾಯಕ್ಕೆ ಭಾರೀ ಹೊಡೆತ: ಕಳೆದ ವರ್ಷ ಎಷ್ಟು? ಈ ಬಾರಿ ಎಷ್ಟು ಸಂಗ್ರಹವಾಗಿದೆ?

ಶಬರಿಮಲೆಗೆ ಮಹಿಳೆಯರ ಪ್ರವೇಶ ಖಂಡಿಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧ ಒಟ್ಟು 517 ಪ್ರಕರಣ ದಾಖಲಾಗಿವೆ. ಜೊತೆಗೆ ಕೇರಳದಲ್ಲಿ ಕಳೆದ ಐದು ದಿನಗಳ ಹಿಂದಿನ ಮಾಹಿತಿ ಪ್ರಕಾರ ಒಟ್ಟು 3,346 ಜನರನ್ನು ಬಂಧಿಸಲಾಗಿದೆ. ಇವರಲ್ಲಿ 122 ಜನರನ್ನು ವಶದಲ್ಲಿ ಇಟ್ಟುಕೊಂಡು, ಉಳಿದವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.

sabarimala 630 630

ಏನಿದು ಪ್ರಕರಣ?:
ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಕ್ಕೆ ಯಾವುದೇ ಲಿಂಗ ತಾರತಮ್ಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಅನ್ವಯ ಅನೇಕ ಮಹಿಳೆಯರು ಅಯ್ಯಪ್ಪನ ದರ್ಶಕ್ಕೆ ದಾವಿಸಿದ್ದರು. ಆದರೆ ಇದನ್ನು ವಿರೋಧಿಸಿ ಕೆಲ ಭಕ್ತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಅನೇಕರು ಗಾಯಗೊಂಡು ಶಬರಿಮಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನೂ ಓದಿ: ಅಯ್ಯಪ್ಪ ಸ್ವಾಮಿಯ ಅನುಗ್ರಹದಿಂದ ನನಗೆ ವರ್ಗಾವಣೆ ಸಿಕ್ತು: ರೆಹನಾ ಫಾತಿಮಾ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *