ಬೆಂಗಳೂರು: ರಾಜ್ಯದಲ್ಲಿ 754 ವಿದೇಶಿಗರು (Foreigners) ವೀಸಾ (Visa) ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದ್ದಾರೆ.
ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಬಗ್ಗೆ ಬಿಜೆಪಿಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಪರಮೇಶ್ವರ್, ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ, ಪ್ರವಾಸಕ್ಕೆ ಸೇರಿ ಹಲವು ವಿಚಾರಕ್ಕೆ ರಾಜ್ಯಕ್ಕೆ ಬರುತ್ತಾರೆ. ರಾಜ್ಯದಲ್ಲಿ ಸುಮಾರು 4,890 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬಂದಿದ್ದಾರೆ. ಇದಲ್ಲದೆ ಒಟ್ಟಾರೆ ಬೆಂಗಳೂರು (Bengaluru) ನಗರ ಮತ್ತು ಉಳಿದ ಜಿಲ್ಲೆಯಲ್ಲಿ ಒಟ್ಟು 8,862 ವಿದೇಶಿಯರು ವಿದೇಶಿ ವೀಸಾದ ಮೇಲೆ ನೆಲೆಸಿದ್ದಾರೆ. ಇದರಲ್ಲಿ 754 ವಿದೇಶಿಯರು ವೀಸಾ ಮುಕ್ತಾಯವಾದರೂ ಇಲ್ಲೇ ಇದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತಾರೆ: ವಿಧಾನಸಭೆಯಲ್ಲಿ ಶಾಸಕಿ ಅಳಲು
ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ. ವಿದೇಶಿ ಪ್ರಜೆಗಳ ಮೇಲೆ ಅಕ್ರಮ ಚಟುವಟಿಕೆಗಳ ವಿಚಾರವಾಗಿ ರಾಜ್ಯದಲ್ಲಿ 502 ದೂರು ದಾಖಲಾಗಿದೆ. ಆಫ್ರಿಕಾ (Africa) ಮತ್ತು ನೈಜೀರಿಯಾದಿಂದ (Nigeria) ಬಂದವರೇ ಇಂತಹ ಪ್ರಕರಣದಲ್ಲಿ ಜಾಸ್ತಿ ಭಾಗಿಯಾಗಿದ್ದಾರೆ. ಇವರು ವೀಸಾ ಮುಗಿದ ಮೇಲೂ ಅವರೇ ಕೇಸ್ ಹಾಕಿಸಿಕೊಂಡು ಇಲ್ಲೇ ಇರೋ ರೀತಿ ಪ್ಲ್ಯಾನ್ ಮಾಡುತ್ತಾರೆ. ಹೀಗಿದ್ದರೂ ನಮ್ಮ ಇಲಾಖೆ ಅವರ ಮೇಲೆ ನಿಗಾ ಇಡುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪೆನ್‌ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ
ಪ್ರತಿ ಠಾಣೆಗಳಿಗೂ ಇವರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಕೆಲ ಭಾಗದಲ್ಲಿ ವಿದೇಶಿ ಪ್ರಜೆಗಳಿಂದ ಗಲಾಟೆಗಳು ಆಗಿವೆ. ಹೀಗಾಗಿ ವೀಸಾ ಮುಗಿದವರನ್ನು ವಾಪಸ್ ಕಳುಹಿಸುವ ಕೆಲಸ ಕಟ್ಟುನಿಟ್ಟಾಗಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: 15 ದಿನದಲ್ಲಿ 30 ಜನರು ಸಸ್ಪೆಂಡ್: ಮುನಿರತ್ನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]