ಗಾಂಧಿನಗರ: ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರು ಮಹಿಳಾ ಪೇದೆಯನ್ನು ಅಮಾನತುಗೊಳಿಸಿದ್ದ ಗುಜರಾತ್ ಎಸಿಪಿ ಈಗ ಖುದ್ದು ಟಿಕ್‍ಟಾಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಬಗ್ಗೆ ಎಸಿಪಿ ಮಂಜಿತ ವಂಜಾರ ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೇದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದು ವಿವಾದ ಆಗುತ್ತಿದ್ದಂತೆ ಎಸಿಪಿ ಮಂಜಿತ ವಂಜಾರ ಅವರನ್ನು ಸಸ್ಪೆಂಡ್ ಮಾಡಿದ್ದರು. ಈಗ ಎಸಿಪಿ ಮಂಜಿತ ವಂಜಾರ ಅವರ ಟಿಕ್‍ಟಾಕ್ ವಿಡಿಯೋ ವೈರಲ್ ಆಗುತ್ತಿದೆ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಡಿಯೋ ನನ್ನ ಸ್ನೇಹಿತರ ಖಾತೆಯಿಂದ ಒಂದು ವರ್ಷದ ಹಿಂದೆ ಅಪ್ಲೋಡ್ ಆಗಿದೆ. ಇಬ್ಬರು ಮಹಿಳಾ ಪೇದೆ ಪೊಲೀಸ್ ಠಾಣೆಯೊಳಗೆ ಟಿಕ್‍ಟಾಕ್ ವಿಡಿಯೋ ಮಾಡಿದ್ದರು. ಅಲ್ಲದೆ ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಇಬ್ಬರನ್ನು ಅಮಾನತುಗೊಳಿಸಿಲ್ಲ. ಬದಲಾಗಿ ಕೆಲಸದ ಸಮಯದಲ್ಲಿ ಅವರು ಯೂನಿಫಾರಂ ಧರಿಸದ್ದಕ್ಕೆ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ವಿಡಿಯೋ ವೈರಲ್ ಆಗಿದ್ದಕ್ಕೆ ಎಸಿಪಿ ಮಂಜಿತ ವಂಜಾರ ಅವರು, ನಾನು ಒಬ್ಬ ಯುವ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನನಗೆ ಸಾಮಾಜಿಕ ಜಾಲತಾಣ ಉಪಯೋಗಿಸಲು ನನಗೆ ಹಕ್ಕಿದೆ. ಅಲ್ಲದೆ ನಾನು ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ, ಸ್ನ್ಯಾಪ್‍ಚಾಟ್ ಹಾಗೂ ಟಿಕ್‍ಟಾಕ್ ಬಳಸುತ್ತೇನೆ. ಸಾಮಾಜಿಕ ಜಾಲತಾಣದಿಂದ ನನಗೆ ಅಪರಾಧಗಳನ್ನು ಕಂಡು ಹಿಡಿಯಲು ಸಹಾಯವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.