ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಆ್ಯಸಿಡ್ ದಾಳಿ ವರದಿಗಳು ಹೆಚ್ಚಾಗಿವೆ. ಸದ್ಯ ಮನೆಯ ಜಗಲಿಯ ಮೇಲೆ ಮಲಗಿದ್ದ ಮಹಿಳೆ ಮೇಲೆ ಕಿಡಿಗೇಡಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ನಗರದ ನಂದಿನಿ ಲೇಔಟ್‍ನ ಗಣೇಶ್ ಬ್ಲಾಕ್‍ನಲ್ಲಿ ನಡೆದಿದೆ.
ಆ್ಯಸಿಡ್ ದಾಳಿಯಿಂದ ಗಾಯಗೊಂಡ ದೇವಿ ಅವರು ರಂಗಭೂಮಿ ಕಲಾವಿದೆಯಾಗಿದ್ದರು. ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಅನಾರೋಗ್ಯದಿಂದ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ಮಾರ್ಚ್ 18 ರಂದು ಮನೆಯ ಜಗಲಿ ಮೇಲೆ ಮಲಗಿದ್ದ ದೇವಿ ಮೇಲೆ ಅವರ ರಂಗಭೂಮಿ ಸಹಪಾಠಿಗಳೇ ಈ ದುಷ್ಕ್ರತ್ಯವನ್ನು ಎಸಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಆರೋಪಿಗಳನ್ನು ರಮೇಶ್, ಸ್ವಾತಿ, ಯೋಗೇಶ್ ಎಂದು ಗುರುತಿಸಲಾಗಿದ್ದು, ಸ್ವಾತಿ ರಮೇಶ್‍ಗೆ ಆ್ಯಸಿಡ್ ತಂದು ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿದ್ದಾರೆ. ಇದೀಗ ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಜಗ್ಗಾಟ ಶುರು