ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿ ಪಾಗಲ್ ಪ್ರೇಮಿ ನಾಗೇಶ್‍ನ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಾತ್ರಿ ಮಾಗಡಿ ರಸ್ತೆ ಬಳಿ ನಾಗೇಶ್ ಅಣ್ಣ ರಮೇಶ್ ಬಾಬು ಅಡಗಿ ಕುಳಿತಿದ್ದ. ಈ ವೇಳೆ ಪೊಲೀಸರು ನಾಗೇಶ್ ಅಣ್ಣನ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ಸುರಿದ ಬಳಿಕ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಫೋನ್ ಮಾಡಿದ್ದ. ಫೋನ್ ಮಾಡಿ ಆ್ಯಸಿಡ್ ಹಾಕಿದ್ದೀನಿ, ಪೊಲೀಸರು ಬರ್ತಾರೆ ಎಸ್ಕೇಪ್ ಆಗು ಎಂದಿದ್ದ. ಬಳಿಕ ಆರೋಪಿ ಅಣ್ಣ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ
Advertisement
Advertisement
ಪೊಲೀಸರು ನಿನ್ನೆ ಸಂಜೆ ಆರೋಪಿ ಅತ್ತಿಗೆಯನ್ನು ಕರೆತಂದು ವಿಚಾರಣೆ ಮಾಡಿದ್ದರು. ನಂತರದಲ್ಲಿ ರಾತ್ರಿ ನಾಗೇಶ್ ಅಣ್ಣನ ಕರೆತಂದು ವಿಚಾರಣೆ ಮಾಡಿದ್ದಾರೆ. ಆ್ಯಸಿಡ್ ದಾಳಿಕೋರ ನಾಗೇಶ್‍ನ ಅಣ್ಣ, ಅತ್ತಿಗೆ ಹಾಗೂ ಪೋಷಕರನ್ನು ಸಹ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Advertisement
Advertisement
ನಮಗೆ ಈ ಬಗ್ಗೆ ಗೊತ್ತಿಲ್ಲ ಸರ್. ಆತ ಕಾಲ್ ಮಾಡಿ ಈ ರೀತಿ ಆ್ಯಸಿಡ್ ಹಾಕಿರುವ ಬಗ್ಗೆ ಹೇಳಿದಾಗ ಕೂಡಲೇ ನಾವೆಲ್ಲರೂ ಭಯಭೀತರಾಗಿ ಮನೆ ಬಿಟ್ಟು ಓಡಿ ಹೋದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ
ಆರೋಪಿ ಅಣ್ಣನು ಏಪ್ರಿಲ್ 27ರ ರಾತ್ರಿ ನಾಗೇಶ್ ಮನೆಗೆ ಬಂದಿದ್ದ. ಅಣ್ಣನ ಜೊತೆಗೆ ಕೆಲ ಸಂಬಂಧಿಕರು ಸಹ ಬಂದಿದ್ದರು. ಈ ವೇಳೆ, ನಾಗೇಶ್‍ನಿಗೆ ತಡರಾತ್ರಿವರೆಗೂ ಬುದ್ಧಿವಾದ ಹೇಳಿದ್ದರು. ಮನೆಗೆ ಬಂದಿದ್ದ ಐದಾರು ಜನರಿಂದ ನಾಗೇಶ್ ಬುದ್ಧಿವಾದ ಹೇಳಿಸಿಕೊಂಡಿದ್ದ. ಯುವತಿ ಪೋಷಕರು ಅಣ್ಣನಿಗೆ ವಿಚಾರ ತಿಳಿಸಿದ ನಂತರ ಬಂದು ಬುದ್ಧಿವಾದ ಹೇಳಿದ್ದರು. ಅಷ್ಟು ಹೇಳಿದರೂ ಮಾತು ಕೇಳದೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಆರೋಪಿಯು ಯುವತಿ ಮನೆಯಿಂದ 300 ಮೀಟರ್ ದೂರದಲ್ಲೇ ಮನೆ ಮಾಡಿಕೊಂಡಿದ್ದ. ಹೆಗ್ಗನಹಳ್ಳಿ ಕ್ರಾಸ್‍ನ ಸಂಜೀವಿನಿ ನಗರದಲ್ಲಿ ಐದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದ. ನಾಗೇಶ್ ತಂದೆ-ತಾಯಿ ಜೊತೆಗೆ ವಾಸವಿದ್ದ. ಸದ್ಯ ಪೊಲೀಸರು ಆರೋಪಿಯ ಪೋಷಕರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.