ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ (Acid) ಎರಚಿದ್ದ ವಿಕೃತ ಪ್ರೇಮಿ ನಾಗೇಶ್ (Nagesh) ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಿರುವುದರ ಜೊತೆಗೆ ಗಂಭೀರ ಕಾಯಿಲೆಯಿಂದಲೂ ಬಳಲುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹೌದು.. ಬೆಂಗಳೂರಿನ (Bengaluru) ಅಮಾಯಕಿಗೆ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದ ನಾಗ ಇದೀಗ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದೀಗ ಜೈಲು ಶಿಕ್ಷೆಯ ಜೊತೆಗೆ ಈತ ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದಾನೆ.
Advertisement
Advertisement
ತಾನು ಪ್ರೀತಿಸಿದ ಯುವತಿ ತನಗೆ ಸಿಗಲಿಲ್ಲ. ಹೀಗಾಗಿ ಆಕೆ ಬೇರೆ ಯಾರಿಗೂ ಸಿಗಬಾರದು ಅಂತಾ ಈತ ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದ. ಕಡೆಗೆ ತಮಿಳುನಾಡಿನ ದೇವಸ್ಥಾನದಲ್ಲಿ ಸ್ವಾಮೀಜಿಯ ವೇಷಭೂಷಣ ತೊಟ್ಟು ತಲೆಮರೆಸಿಕೊಂಡಿದ್ದ. ಕಾಮಾಕ್ಷಿ ಪಾಳ್ಯ ಪೊಲೀಸರು ಆತನನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದರು. ಜೈಲಿನಲ್ಲಿರುವ ಆ್ಯಸಿಡ್ ನಾಗನಿಗೆ ಇದೀಗ ಗ್ಯಾಂಗ್ರೀನ್ ಬಂದು ಚಿಕಿತ್ಸೆ ಸರಿಯಾಗಿ ಸಿಗದೇ ಬಳಲುತ್ತಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ
Advertisement
Advertisement
ನಾಗನ ಕಾಲುಗಳಿಗೆ ಗ್ಯಾಂಗ್ರಿನ್ ಬಂದು ಎರಡು ಕಾಲು ಕಟ್ ಮಾಡುವ ಮಟ್ಟಕ್ಕೆ ಬಂದು ಬಿಟ್ಟಿದೆಯಂತೆ. ಆರೋಪಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸಲು ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಒಟ್ನಲ್ಲಿ ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೇ ತಾನು ಮಾಡಿದ ತಪ್ಪಿಗೆ ನಾಗಾ ಪ್ರಾಯಶ್ಚಿತ್ತ ಪಡೋ ಕಾಲ ಬಂದೊದಗಿದೆ. ಇದನ್ನೂ ಓದಿ: ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ರಣಹೇಡಿಗಳು: ಕರವೇ ನಾರಾಯಣಗೌಡ