ರಾಯ್ಪುರ: ಕಳೆದ ನಾಲ್ಕು ದಿನಗಳಿಂದಲೂ ಕೊಳವೆ ಬಾವಿಯಲ್ಲೇ ಸಿಲುಕಿದ್ದ 11 ವರ್ಷದ ಹುಡುಗನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸತತ 104 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ ರೋಚಕ ಘಟನೆ ಛತ್ತಿಸ್‌ಘಡದಲ್ಲಿ ನಡೆದಿದೆ.
माना कि चुनौती बड़ी थी
हमारी टीम भी कहाँ शांत खड़ी थी
रास्ते अगर चट्टानी थे
तो इरादे हमारे फौलादी थे
सभी की दुआओं और रेस्क्यू टीम के अथक, समर्पित प्रयासों से राहुल साहू को सकुशल बाहर निकाल लिया गया है।
वह जल्द से जल्द पूर्ण रूप से स्वस्थ हो, ऐसी हमारी कामना है। pic.twitter.com/auL9ZMoBP7
— Bhupesh Baghel (@bhupeshbaghel) June 14, 2022
Advertisement
ಕಳೆದ ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಯಲ್ಲಿ ಆಟವಾಡುತ್ತಿದ್ದ ಬಾಲಕ ರಾಹುಲ್ ಸಾಹು (11) ಜಾಂಜ್‌ಗೀರ್ ಚಂಪಾ ಜಿಲ್ಲೆಯ ಪಿಹ್ರಿದ್ ಗ್ರಾಮದಲ್ಲಿ ತಮ್ಮ ಮನೆಯ ಹಿಂಬದಿಯಲ್ಲೇ ಕೊರೆದಿದ್ದ 80 ಅಡಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ
Advertisement
#WATCH | Chhattisgarh: 10-yr-old Rahul who fell into a borewell in Pihrid village of Janjgir-Champa district was successfully rescued after over 100 hours of operation. pic.twitter.com/HDsoRXvjt3
— ANI MP/CG/Rajasthan (@ANI_MP_CG_RJ) June 14, 2022
Advertisement
ಇದರಿಂದ ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸ್, ಭಾರತೀಯ ಸೇನೆ ಯೋಧರು ಹಾಗೂ ಆಡಳಿತಾಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಅಧಿಕಾರಿ ವರ್ಗ ಬಾಲಕನನ್ನು ರಕ್ಷಿಸಲು ಸತತ ಕಾರ್ಯಾಚರಣೆ ಕೈಗೊಂಡಿತ್ತು. ಬಾಲಕನಿಗೆ ಆಮ್ಲಜನಕ ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿತ್ತು. ರಾಹುಲ್‌ನ ಪ್ರತಿ ನಡೆಯ ಮೇಲೆ ನಿಗಾ ಇಡಲು ವಿಶೇಷ ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ಪದಾರ್ಥಗಳನ್ನೂ ನೀಡಲಾಗಿತ್ತು. ಸದ್ಯ ಬಾಲಕನನ್ನು ರಕ್ಷಿಸಿದ್ದು ಬಿಲಾಸ್‌ಪುರ ಜಿಲ್ಲೆಯ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಲಾಸ್‌ಪುರ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
Advertisement
अंततः राहुल ने आंखे खोली
बचाव दल को देखकर राहुल ने प्रसन्नता जाहिर की और अपनी आंखें खोली है। इस ऑपरेशन में एक चौंका देने वाली घटना घटी, आज शाम उस बोरवेल में एक सांप आ गया था लेकिन राहुल की जीवटता से वह खतरा भी टल गया।#SaveRahulAbhiyaan pic.twitter.com/8yt5LlJ5il
— CMO Chhattisgarh (@ChhattisgarhCMO) June 14, 2022
ಹಾವು – ಚೇಳುಗಳ ಅಪಾಯ: ಕೊಳವೆ ಬಾವಿಯಿಂದ ಹುಡುಗನನ್ನು ರಕ್ಷಿಸಲು ಅದಕ್ಕೆ ಸಮನಾಗಿ ಸುರಂಗ ಕೊರೆಸುವ ಕಾಮಗಾರಿಯಲ್ಲೂ ಬಿಕ್ಕಟ್ಟು ಕಡಿಮೆ ಆಗಿರಲಿಲ್ಲ. ಕಲ್ಲಿನ ಬಂಡೆಯಿಂದಾಗಿ ಹಾವು, ಚೇಳುಗಳು ಬರುವ ಅಪಾಯವಿತ್ತು. ಅತ್ಯಂತ ವಿಷಕಾರಿ ಹಾವುಗಳನ್ನು ತೆರವುಗೊಳಿಸಲು ಉರಗ ತಜ್ಞರನ್ನು ಹಾಗೂ ಅಪಾಯ ಸಂಭವಿಸಿದರೆ ತಕ್ಷಣ ಚಿಕಿತ್ಸೆ ನೀಡಲು ವೈದ್ಯರಿಗೆ ವ್ಯವಸ್ಥೆಯನ್ನೂ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿತ್ತು ಎಂದು ರಕ್ಷಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಲೋಕಾಯುಕ್ತ ಬಿ.ಎಸ್. ಪಾಟೀಲ್
हमारा बच्चा बहुत बहादुर है।
उसके साथ गढ्ढे में 104 घंटे तक एक सांप और मेढक उसके साथी थे।
आज पूरा छत्तीसगढ़ उत्सव मना रहा है, जल्द अस्पताल से पूरी तरह ठीक होकर लौटे, हम सब कामना करते हैं।
इस ऑपरेशन में शामिल सभी टीम को पुनः बधाई एवं धन्यवाद। pic.twitter.com/JejmhL7PBj
— Bhupesh Baghel (@bhupeshbaghel) June 14, 2022
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಎಲ್ಲರ ಪ್ರಾರ್ಥನೆ, ರಕ್ಷಣಾ ತಂಡದ ನಿರಂತರ ಕಾರ್ಯಾಚಾರಣೆ ಹಾಗೂ ಸಮರ್ಪಿತ ಪ್ರಯತ್ನದಿಂದಾಗಿ ರಾಹುಲ್ ಸಾಹುವನ್ನು ರಕ್ಷಿಸಲಾಗಿದೆ. ಆಸ್ಪತ್ರೆಯಿಂದ ಆದಷ್ಟು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದಿದ್ದಾರೆ.