ಕಾರವಾರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಅಂಕೋಲಾ (Ankola) ಪೊಲೀಸರು ಗುಂಡು ಹಾರಿಸಿದ್ದಾರೆ.
ಗುಂಡೇಟು ತಿಂದ ಆರೋಪಿಗಳನ್ನು ಮಂಗಳೂರು (Mangaluru) ಮೂಲದ ತಲ್ಲತ್ತ ಮತ್ತು ನವಫಾಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ, ಜ.29 ರಂದು ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದ್ದ ಕಾರಿನಲ್ಲಿ ಸಿಕ್ಕ ಒಂದು ಕೋಟಿ ರೂ. ಪ್ರಕರಣದಲ್ಲಿ ಬಂಧಿತರಾಗಿದ್ದರು.ಇದನ್ನೂ ಓದಿ: Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ
ಸ್ಥಳ ಮಹಜರಿಗಾಗಿ ಆರೋಪಿಗಳನ್ನ ಅಂಕೋಲಾ ಕಡೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಪತಿಗೆ ಶಾಕ್ – 4 ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ!
ಘಟನೆಯಲ್ಲಿ ಮೂವರು ಪೊಲೀಸರ ಕಾಲಿಗೆ ಮತ್ತು ತಲೆಗೆ ಗಾಯವಾಗಿದೆ. ಗಾಯಾಳುಗಳನ್ನ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ ಭೇಟಿ ನೀಡಿದ್ದಾರೆ.
ಕಾರು ಪತ್ತೆಯಾದ ತಿಂಗಳ ಬಳಿಕ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಕಾರಿನಲ್ಲಿ ಪತ್ತೆಯಾಗಿದ್ದು ದರೋಡೆ ಮಾಡಿ ಕೊಂಡೊಯ್ಯುತ್ತಿದ್ದ ಹಣ ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: 180 ರೂ. ಟೋಲ್ ಉಳಿಸಲು ಹೋಗಿ ದುರಂತ ಅಂತ್ಯ – ಒಂದೇ ಕುಟುಂಬದ ನಾಲ್ವರ ಸಾವು