ಪಾಟ್ನಾ: ವಾಮಾಚಾರ (Witchcraft) ಮಾಡಿರುವ ಆರೋಪದ ಮೇಲೆ ಸ್ಥಳೀಯರು ಪರಿಶಿಷ್ಟ ಜಾತಿ ಸಮುದಾಯದ ಮಹಿಳೆಯನ್ನು (Woman) ತನ್ನ ಮನೆಯಲ್ಲಿಯೇ ಸಜೀವ ದಹನ ಮಾಡಿರುವ ಆಘಾತಕಾರಿ ಘಟನೆ ಶನಿವಾರ ಸಂಜೆ ಬಿಹಾರದಲ್ಲಿ (Bihar) ನಡೆದಿದೆ.
ಜಾರ್ಖಂಡ್ ಅರಣ್ಯಕ್ಕೆ ಹೊಂದಿಕೊಂಡಿರುವ ಮೈಗ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಚ್ಮಾಹ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರ್ಜುನ್ ದಾಸ್ ಅವರ ಪತ್ನಿ ರೀಟಾ ದೇವಿ (45) ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಗೆ ಧಾವಿಸಿದ್ದ ಸ್ಥಳೀಯ ಪೊಲೀಸ್ ತಂಡವನ್ನು ಕೂಡಾ ಅಲ್ಲಿಂದ ತೆರಳುವಂತೆ ಒತ್ತಾಯಿಸಿದ್ದಾರೆ.
ಬಳಿಕ ಇಮಾಮ್‌ಗಂಜ್ ಎಸ್‌ಡಿಪಿಒ ಮನೋಜ್ ರಾಮ್ ನೇತೃತ್ವದಲ್ಲಿ ಸ್ಥಳಕ್ಕೆ ಹೆಚ್ಚಿನ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ಮಹಿಳೆಯ ಮೃತ ದೇಹವನ್ನು ಸುಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಗಯಾಕ್ಕೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್
ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ಮತ್ತು 436 ಹಾಗೂ ವಾಮಾಚಾರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, 9 ಮಹಿಳೆಯರನ್ನು ಬಂಧಿಸಲಾಗಿದೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಹರ್‌ಪ್ರೀತ್ ಕೌರ್ ಪ್ರಕಾರ, ಕೊಲೆ ನಡೆಸಿರುವ ಆರೋಪದಲ್ಲಿ ಇನ್ನೂ ಹೆಚ್ಚಿನವರ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಅದೇ ಗ್ರಾಮದ ನಿವಾಸಿಯಾಗಿದ್ದ ಪರಮೇಶ್ವರ್ ಭುಯಾನ್ ಅವರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ, ಕಳೆದ ತಿಂಗಳು ಮೃತಪಟ್ಟಿದ್ದರು. ಆದರೆ ಅವರ ಕುಟುಂಬ ರೀಟಾ ದೇವಿ ವಾಮಾಚಾರದ ಮೂಲಕ ಕೊಲೆ ಮಾಡಿರುವುದಾಗಿ ಆರೋಪಿಸಿ, ನಿನ್ನೆ ಆಕೆಯನ್ನು ಕೊಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ