ಇಸ್ಲಾಮಾಬಾದ್: ಧರ್ಮನಿಂದನೆಯ (Blasphemy) ಆರೋಪದಡಿ ಪೊಲೀಸರ ಬಂಧನದಲ್ಲಿದ್ದ ವ್ಯಕ್ತಿಯನ್ನು ಜನಸಮೂಹವೊಂದು ಠಾಣೆಗೆ ನುಗ್ಗಿ, ಆತನನ್ನು ಎಳೆತಂದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಶನಿವಾರ ಪಾಕಿಸ್ತಾನದಲ್ಲಿ (Pakistan) ನಡೆದಿದೆ.
ಘಟನೆ ನಂಕಾನಾ ಸಾಹಿಬ್ ನಗರದಲ್ಲಿ ನಡೆದಿದೆ. ಮೊಹಮ್ಮದ್ ವಾರಿಸ್ (20) ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾಗಿ ಆರೋಪಿಸಲಾಗಿದ್ದು, ಈ ಹಿನ್ನೆಲೆ ಆತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಘಟನೆಯಿಂದ ಕೆಂಡಾಮಂಡಲವಾಗಿದ್ದ ಜನರು ಪೊಲೀಸ್ ಠಾಣೆಗೆ ನುಗ್ಗಿ, ಆರೋಪಿ (Accused) ವ್ಯಕ್ತಿಯನ್ನು ಹೊರಗೆಳೆದುಕೊಂಡು ಬಂದಿದ್ದಾರೆ. ಬಳಿಕ ಆತನನ್ನು ಹೊಡೆದು ಬರ್ಬರವಾಗಿ ಕೊಂದಿದ್ದಾರೆ. ನಂತರ ಆತನ ದೇಹಕ್ಕೆ ಬೆಂಕಿ ಹಚ್ಚುವ ಪ್ರಯತ್ನವನ್ನೂ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಠಾಣೆಯಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳು ಇದ್ದಿದ್ದರಿಂದ ಜನಸಮೂಹವನ್ನು ಆರಂಭದಲ್ಲಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ವ್ಯಕ್ತಿಯ ಹತ್ಯೆಯಾದ ಬಳಿಕ ಆತನ ಶವವನ್ನು ಜನರು ಸುಡಲು ಮುಂದಾದಾಗ ಅಧಿಕಾರಿಗಳು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ಪಾಕಿಸ್ತಾನದಲ್ಲಿ ಧರ್ಮನಿಂದನೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದ್ದು, ಆರೋಪಿಗೆ ಮರಣದಂಡನೆಯನ್ನೂ ವಿಧಿಸುವ ಸಾಧ್ಯತೆಯಿರುತ್ತದೆ. ಇಂತಹ ಆರೋಪವುಳ್ಳ ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಸಾಯಿಸಿರುವಂತಹ ಹಲವು ನಿದರ್ಶನಗಳಿವೆ. 2021ರಲ್ಲಿ ಬಟ್ಟೆ ಫ್ಯಾಕ್ಟರಿಯ ಮ್ಯಾನೆಜರ್ ಆಗಿದ್ದ ಶ್ರೀಲಂಕಾದ ಪ್ರಜೆಯೊಬ್ಬರು ಧರ್ಮನಿಂದನೆಯ ಆರೋಪ ಹೊತ್ತಿದ್ದ ಹಿನ್ನೆಲೆ ಅವರನ್ನು ಜನಸಮೂಹ ಹತ್ಯೆ ನಡೆಸಿತ್ತು. ಇದನ್ನೂ ಓದಿ: SSLC ಪೂರ್ವಸಿದ್ಧತಾ ಪರೀಕ್ಷೆಗೂ ವಿದ್ಯಾರ್ಥಿಗಳು ಶುಲ್ಕ ಕಟ್ಟಬೇಕು – ಶಿಕ್ಷಣ ಇಲಾಖೆಯಿಂದ ಹೊಸ ನಿಯಮ
Advertisement
ಈ ಘಟನೆಯ ಬಳಿಕ ಪಾಕಿಸ್ತಾನ ಬಹಳಷ್ಟು ಟೀಕೆಗೆ ಗುರಿಯಾಗಿದೆ. ಧರ್ಮನಿಂದನೆಯ ಆರೋಪ ಹೊತ್ತಿರುವ ವ್ಯಕ್ತಿಗಳ ಹತ್ಯೆಗಳನ್ನು ತಡೆಯಲು ಅಲ್ಲಿನ ಆಡಳಿತ ಹೆಚ್ಚಿನ ಪ್ರಯತ್ನ ಮಾಡುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಹಕ್ಕುಗಳ ಗುಂಪು ಹಿಂದಿನಿಂದಲೂ ಆರೋಪಿಸಿದೆ. ಇದನ್ನೂ ಓದಿ: ನಾನು ಚಾಕೊಲೇಟ್ ಖರೀದಿಸದಿದ್ದರೂ ಪರ್ವಾಗಿಲ್ಲ..: ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪ ಸಂತ್ರಸ್ತರಿಗೆ ನೀಡಿದ 9ರ ಬಾಲಕ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k