ಹುಬ್ಬಳ್ಳಿ: ಹುಬ್ಬಳ್ಳಿಯ ನ್ಯೂ ಕಾಟನ್ ಮಾರ್ಕೆಟ್‍ನ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳವಿಗೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಅಕ್ಟೋಬರ್ 13 ರಂದು ತಡರಾತ್ರಿ ಎಕ್ಸಿಸ್ ಬ್ಯಾಂಕ್ ಎಟಿಎಂ ಒಳಗೆ ವ್ಯಕ್ತಿಯೊರ್ವ ರಾಡ್ ಹಿಡಿದು ನುಗ್ಗಿದ್ದ. ಎಟಿಎಂ ಮಷಿನ್‍ಗೆ ಅಳವಡಿಸಿದ್ದ ವೈರ್‌ಗಳನ್ನು ಕಿತ್ತು ಕಳವಿಗೆ ಮುಂದಾಗಿದ್ದ. ಇದನ್ನು ಯಾರೋ ಗಮನಿಸಿದ್ದರಿಂದ ಬಳಿಕ ಅದು ಸಾಧ್ಯವಾಗದೇ ಬರಿಗೈಲಿ ವಾಪಸಾಗಿದ್ದ. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್!
Advertisement
Advertisement
ಇನ್ಸ್‌ಸ್ಪೆಕ್ಟರ್ ರವಿಚಂದ್ರ ಡಿ.ಬಿ. ಹಾಗೂ ಸಿಬ್ಬಂದಿ ಎಟಿಎಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಯ ಚಹರೆ ಆಧಾರದ ಮೇಲೆ ಹುಡುಕಾಟ ಆರಂಭಿಸಿದ್ದರು. ಬಳಿಕ ಬೆಳಗಾವಿ, ಬೈಲಹೊಂಗಲ, ಸಂಕೇಶ್ವರ, ಬೆಂಗಳೂರು ಸುತ್ತಮುತ್ತ ಓಡಾಡಿ ಮಾಹಿತಿ ಕಲೆ ಹಾಕಿ, ಆರೋಪಿಯನ್ನು ಬಂಧಿಸಿಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಕೋಚಿಂಗ್‍ಗೆ ಬರುವ ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
Advertisement
ಪಿಎಸ್‍ಐಗಳಾದ ಬಿ.ಎಸ್.ಪಿ. ಅಶೋಕ್, ಯು.ಎಂ. ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಆಯುಕ್ತ ಲಾಭೂರಾಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.