ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ಬಂಧನಕ್ಕೆ ಒಳಗಾಗಿರುವ ಎ-7 ಆರೋಪಿ ಅನು ಅಲಿಯಾಸ್ ಅನುಕುಮಾರ್ ತನ್ನ ತಂದೆ ಅಂತ್ಯಕ್ರಿಯೆಗೆ ಚಿತ್ರದುರ್ಗಕ್ಕೆ ಹೊರಟಿದ್ದಾರೆ.
ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ6, ಎ7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಶುಕ್ರವಾರ ಬಂಧಿಸಲಾಗಿತ್ತು. ಎ7 ಆರೋಪಿ ಅನು ಬಂಧನದ ವಿಷಯ ತಿಳಿದ ಆತನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇಂದು (ಶನಿವಾರ) ಅಂತ್ಯಕ್ರಿಯೆ ನೆರವೇರಬೇಕಿತ್ತು. ಆದ್ರೆ ಕುಟುಂಬಸ್ಥರು ಮಗ ಬರುವವರೆಗೂ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ (Court) ಅನುಮತಿ ಪಡೆದು ಪೊಲೀಸರು ಆರೋಪಿಯನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಂತ್ಯಕ್ರಿಯೆ ನೇರವೇರಿಸಿದ ಬಳಿಕ ಮತ್ತೆ ಬೆಂಗಳೂರಿಗೆ ಕರೆತರಲಿದ್ದಾರೆ.
ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಶುಕ್ರವಾರ ಎ6 ಆರೋಪಿ ಜಗ್ಗ ಅಲಿಯಾಸ್ ಜಗದೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಲಾಗಿತ್ತು. ನಂತರ ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ ಅವರು ತಮ್ಮ ಸುಪರ್ಧಿಗೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್
ಬಂಧನದ ಬೆನ್ನಲ್ಲೇ ಆರೋಪಿ ಅನುಕುಮಾರ್ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಸಾವನ್ನಪ್ಪಿದರು. ಇದನ್ನೂ ಓದಿ: ದರ್ಶನ್‍ಗೆ ಶನಿ ಕಾಟ – ಸಂಕಷ್ಟ ನಿವಾರಣೆಗೆ ಕುಟುಂಬಸ್ಥರಿಂದ ಶನಿ ಶಾಂತಿ ಪೂಜೆ