ಚಿಕ್ಕಬಳ್ಳಾಪುರ: ಇಶಾ ಫೌಂಡೇಷನ್ (Isha Foundation) ವತಿಯಿಂದ ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ 112 ಅಡಿ ಎತ್ತರದ ಆದಿಯೋಗಿ (Adiyogi) ಶಿವನ ವಿಗ್ರಹ ನೋಡಲು ಬರುವ ಭಕ್ತರಿಂದ ಅವಲಗುರ್ಕಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇಶಾ ಫೌಂಡೇಷನ್ ವತಿಯಿಂದ ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ 112 ಅಡಿ ಎತ್ತರದ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿದ್ದರಿಂದ ಪ್ರತಿದಿನ ಸಾವಿರಾರು ಶಿವನ ಭಕ್ತರು ಬೈಕ್ ಹಾಗೂ ಕಾರುಗಳಲ್ಲಿ ಆದಿಯೋಗಿ ಶಿವನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿಯೊಂದು, ತನಗೆ ಸಂಬಂಧವೇ ಇಲ್ಲದಿದ್ದರೂ, ರಸ್ತೆಯಲ್ಲಿ ನಿಂತು ಟೋಲ್ ಸುಂಕದ ರೀತಿಯಲ್ಲಿ ವಾಹನಗಳಿಗೆ ಹಣ ವಸೂಲಿ ಮಾಡುವುದರ ಮೂಲಕ ಆದಿಯೋಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಆದಿಯೋಗಿ ಶಿವನನ್ನು ನೋಡಲು ಬೈಕ್ ಹಾಗೂ ಕಾರುಗಳಲ್ಲಿ ಪ್ರತಿ ದಿನ ಸಾವಿರಾರು ಜನ ಆಗಮಿಸುತ್ತಿದ್ದು, ಇದನ್ನೇ ತಮ್ಮ ಸೌಭಾಗ್ಯ ಎಂದುಕೊಂಡಿರುವ ಸ್ಥಳೀಯ ಅವಲಗುರ್ಕಿ ಗ್ರಾಪಂ ಕಾರ್ಯಾಲಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ವಡ್ರೇಪಾಳ್ಯದ ಕ್ರಾಸ್ ಬಳಿ ಇಶಾ ಪೌಂಡೇಷನ್‌ಗೆ ಹೋಗುವ ವಾಹನಗಳನ್ನು ತಡೆದು, ಬೈಕ್‌ಗೆ 10 ರೂಪಾಯಿ ಹಾಗೂ ಕಾರುಗಳಿಗೆ 30 ರೂಪಾಯಿ ಸುಂಕ ವಸೂಲಿ ಮಾಡುತ್ತಿದ್ದಾರೆ. ಅಸಲಿಗೆ ಪಂಚಾಯಿತಿಯಿಂದ ರಸ್ತೆಯಾಗಲಿ, ನೀರು, ಸ್ವಚ್ಛತೆ, ನೋಡಲು ಬರುವ ಸ್ಥಳ ಸಹ ಯಾವುದು ಸೇರಿಲ್ಲ, ಆದರೆ ಜನ ತಮ್ಮ ವ್ಯಾಪ್ತಿಯ ಏರಿಯಾದಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂಬ ಅನಧಿಕೃತವಾಗಿ ಸುಂಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅಂತಾರೆ, ಅವ್ರಿಗೇನು ಹೇಳೋರು ಕೇಳೋರಿಲ್ವಾ: ಈಶ್ವರಪ್ಪ ಪ್ರಶ್ನೆ
Advertisement
ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಕಾ ಖಾಸಗಿ ಜಮೀನಿನಲ್ಲಿ ಅಂದರೆ ಇಶಾ ಪೌಂಡೇಷನ್‌ಗೆ ಸೇರಿದ ಖಾಸಗಿ ಜಾಗದಲ್ಲಿ ಆದಿಯೋಗಿ ಪ್ರತಿಷ್ಠಾಪನೆ ಮಾಡಲಾಗಿದೆ. ರಸ್ತೆಗಳನ್ನು ಸಹ ಇಶಾ ಪೌಂಡೇಷನ್ ಅಭಿವೃದ್ಧಿ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಪಂಚಾಯಿತಿಯಿಂದ ಇದುವರೆಗೂ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಆದರೂ ಅವಲಗುರ್ಕಿ ಗ್ರಾಪಂನವರು ವಾಹನ ಪ್ರವೇಶ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ.
Advertisement
ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಕಚೇರಿಗೆ ಹೋದರೂ ಅಲ್ಲಿಯೂ ಬೀಗ ಹಾಕಲಾಗಿದೆ. ಒಟ್ಟಿನಲ್ಲಿ ವೀಕೆಂಡ್‌ನಲ್ಲಿ ನಂದಿ ಬೆಟ್ಟ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ದರ್ಶನಕ್ಕೆ ಆಗಮಿಸುತ್ತಿದ್ದಾರೆ, ಆದರೆ ಇದನ್ನೇ ಸೌಭಾಗ್ಯವೆಂದು ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಪಂಚಾಯಿತಿಯೊಂದು ಕಾನೂನುಬಾಹಿರ ವಸೂಲಿ ಮಾಡುತ್ತಿದ್ದು, ಇದು ಶಿವನ ಭಕ್ತರು ಹಾಗೂ ಇಶಾ ಫೌಂಡೇಷನ್‌ನ ಅಸಮಾಧಾನ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೂ ಓದಿ: ಭವಾನಿಯವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದು ತಮಾಷೆಗೆ; ಅವರಿಗೆ ಹಾಸನ ಸುರಕ್ಷಿತ ಅಲ್ಲ – ಸಿ.ಟಿ.ರವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k