ಕಾರವಾರ: ಪೀಠೋಪಕರಣ ತಯಾರಿಕಾ ಮಳಿಗೆಯಲ್ಲಿ (Furniture Store) ಆಕಸ್ಮಿಕ ಬೆಂಕಿ (Fire) ತಗಲಿ ಮಳಿಗೆಯಲ್ಲಿದ್ದ ಕೋಟ್ಯಂತರ ರೂ. ಬೆಲೆಯ ಪೀಠೋಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ ನಗರದ ಅಂಬೇವಾಡಿಯಲ್ಲಿ ಶುಕ್ರವಾರ ನಡೆದಿದೆ.
ಉದಯ ನಾಯ್ಕ ಅವರಿಗೆ ಸೇರಿದ್ದ ಪೀಠೋಪಕರಣ ತಯಾರಿಕಾ ಮಳಿಗೆ ಇದಾಗಿದ್ದು, ಇಂದು ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಪಕ್ಕದ ಮಳಿಗೆಗಳಿಗೂ ತಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದು, ಹೆಚ್ಚಿನ ಅನಾಹುತ ಆಗದಂತೆ ತಡೆದಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಹೂವಿನ ಅಲಂಕಾರ: ಸಮಾಧಿ ಬಳಿ ಅಭಿಮಾನಿಗಳ ದಂಡು