ಬಳ್ಳಾರಿ: ವಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗಲ್ಲ ಎನ್ನುವ ಆರೋಪ ಮಧ್ಯೆಯೇ ರೋಗಿಯೊಬ್ಬರು ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ಮೃತಪಟ್ಟ ಘಟನೆ ನಡೆದಿದೆ.
ಗುರುವಾರ ಕುರುಗೋಡ್ ತಾಲೂಕಿಮ ಬೈಲೂರಿನಲ್ಲಿ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೈಲೂರಿನ ಜಿಎಂ ವೀರೇಶಯ್ಯ(48) ಗಂಭೀರವಾಗಿ ಗಾಯಗೊಂಡಿದ್ದರು. ಕೆಎಸ್‍ಆರ್ ಟಿಸಿ ಬಸ್ ಗುದ್ದಿದ ಪರಿಣಾಮ ವೀರೇಶಯ್ಯನ ಕಾಲು ಮುರಿದಿತ್ತು. ಹೀಗಾಗಿ ಕೂಡಲೇ ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
Advertisement
Advertisement
ಆಸ್ಪತ್ರೆಗೆ ತಂದಾಗ ವೆಂಟಿಲೇಟರ್ ಇಲ್ಲ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಎಂದು ವಿಮ್ಸ್ ಸಿಬ್ಬಂದಿ ಹೇಳಿದ್ದಾರೆ. ಗಾಯಾಳಿಗೆ ಸರಿಯಾದ ಚಿಕಿತ್ಸೆ ನೀಡದ ಪರಿಣಾಮ ಆಸ್ಪತ್ರೆಗೆ ತಂದು ಎರಡು ಗಂಟೆಯಲ್ಲೇ ವೀರೇಶಯ್ಯ ಸಾವನ್ನಪ್ಪಿದ್ದಾರೆ.
Advertisement
ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಿದ್ದಾರೆಂದು ವಿರೇಶಯ್ಯನ ಸಂಬಂಧಿಗಳ ಆರೋಪಿಸಿದ್ದಾರೆ. ನಮಗಾದಂತೆ ಇನ್ಯಾರಿಗೂ ಈ ರೀತಿ ಆಗದಿರಲಿ ಆಸ್ಪತ್ರೆಯಲ್ಲಿ ಸೂಕ್ತ ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಅವರು ಆಕ್ರೋಶ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv