ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಲಾರಿ ಮತ್ತು ಜೀಪ್‍ಗಳ ಭೀಕರ ಅಪಘಾತವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆ ಎಸ್‍ಪಿ ಕೋಲಾರ ಆಸ್ಪತ್ರೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಅಪಘಾತದಲ್ಲಿ ಎರಡು ವರ್ಷ ವಯಸ್ಸಿನ ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದೆ. ಆ ಮಗುವನ್ನು ಚಿಂತಾಮಣಿಯಿಂದ ಜೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್ ನಲ್ಲಿ ಕೋಲಾರಕ್ಕೆ ಕರೆತರಲಾಗಿತ್ತು. ಇದನ್ನೂ ಓದಿ: ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?
ಘಟನೆಗೆ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯವು ಎದ್ದು ಕಾಣುತ್ತಿದೆ. ಸ್ಥಳಿಯರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಾರಿಗೆ ಬಸ್‍ಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಜಾಲಪ್ಪ ಆಸ್ಪತ್ರೆಗೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ!
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ಸಿಮೆಂಟ್ ಲಾರಿ ಹಾಗೂ ಜೀಪ್ ನಡುವೆ ನಡೆದ ಭೀಕರ ಅಪಘಾತದಲ್ಲಿ 8 ಜನರು ಮೃತಪಟ್ಟಿದ್ರೆ, 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೋಲಾರದ ಆರ್.ಎಲ್.ಜಾಲಪ್ಪ ಹಾಗು ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ 2 ಮಕ್ಕಳು, 6 ಮಹಿಳೆಯರು ಸೇರಿ ಒಟ್ಟು 17 ಜನರು ಜೀಪ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್ಗಳಿಂದ ಕರೆ