ಓಮಿನಿ ಕಾರು-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ; ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವು

Public TV
1 Min Read
accident davanagere

ದಾವಣಗೆರೆ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿನ ಗುಳ್ಳೇನಹಳ್ಳಿ ಬಳಿಯ ಬೀರೂರು-ಸಮ್ಮಸ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರುದ್ರೇಶಪ್ಪ (64), ಮಲ್ಲಿಕಾರ್ಜುನ್ (62) ಹಾಗೂ ಗಂಗಮ್ಮ (80 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪೂರ್ಣ ತೋಳಿನ ಅಂಗಿ, ಶೂ ಧರಿಸುವುದು ನಿಷೇಧ – PSI ಪರೀಕ್ಷಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟ

DVG ACCIDENT DEATH AV 1 e1705463732761

ಮೃತರು ಹಾಗೂ ಗಾಯಾಳುಗಳು ಚನ್ನಗಿರಿ ತಾಲೂಕಿನ‌ ನಾರಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಸಂತೆಬೆನ್ನೂರು ಕಡೆಯಿಂದ ಚನ್ನಗಿರಿಗೆ ಒಮಿನಿಯಲ್ಲಿ ಒಂದೇ ಕುಟುಂಬಸ್ಥರು ಹೋಗುವಾಗ ಎದುರಿಗೆ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ.

ಸ್ಥಳದಲ್ಲೇ ‌ಮೂವರು ಸಾವನ್ನಪ್ಪಿದ್ದು. ಗಾಯಾಳುಗಳಿಗೆ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಚನ್ನಗಿರಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಲಿಗೆ ಗುಂಡೇಟು ಬಿದ್ದರೂ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಕೊಲೆ ಆರೋಪಿ ಅರೆಸ್ಟ್

Share This Article