ತುಮಕೂರು: ಬಂಡೆ ಬ್ಲಾಸ್ಟ್ (Rock Blast) ಮಾಡುವ ವೇಳೆ ಅವಘಡವೊಂದು ಸಂಭವಿಸಿದ ಪರಿಣಾಮ ಇಬ್ಬರು ಕಾರ್ಮಿಕರು (Workers) ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.
ಮೃತರನ್ನು ಬಿಹಾರ ಮೂಲದ ಮೊಹಮ್ಮದ್ ಅಬೂಲ್ (29) ಹಾಗೂ ಛತ್ತೀಸ್‌ಗಢ ಮೂಲದ ಮೋನು (24) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ ಕೌತಮಾರನಹಳ್ಳಿ ಬಳಿಯಿರುವ ಕರ್ನಾಟಕ ಸ್ಟೋನ್ ಕ್ರಷರ್‌ನಲ್ಲಿ ಘಟನೆ ನಡೆದಿದೆ. ಈ ಕ್ರಷರ್ (Crusher) ತುಮಕೂರು ಮೂಲದ ಕೆ.ಎ.ಎಂ ಹನೀಫ್ ಎಂಬವರಿಗೆ ಸೇರಿದ್ದು, ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕ್ರಷರ್‌ನಲ್ಲಿ ಬಂಡೆಗೆ ಡ್ರಿಲ್ ಮಾಡಲು ಬೆಟ್ಟ ಹತ್ತಿದ ಇಬ್ಬರು ಕಾರ್ಮಿಕರು ಆಯತಪ್ಪಿ ಸುಮಾರು 100 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದು ಜೀವತೆತ್ತಿದ್ದಾರೆ. ಇದನ್ನೂ ಓದಿ: ಅತ್ತಿಗೆ ಮೇಲೆ ಗ್ಯಾಂಗ್‌ರೇಪ್ ಮಾಡಿ ಕೊಲೆಗೈದ ಐವರು ಮೈದುನರು – ದುಬೈನಲ್ಲಿರೋ ಮಹಿಳೆಯ ಪತಿಯೇ ಮಾಸ್ಟರ್‌ಮೈಂಡ್
Advertisement
Advertisement
ಕ್ರಷರ್ ಮಾಲೀಕನ ಬೇಜವಾಬ್ದಾರಿತನಕ್ಕೆ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕ್ರಮಗಳನ್ನ ಕೊಡದೇ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಘಟನೆಯಿಂದ ಗಂಭೀರ ಗಾಯಗೊಂಡ ಮತ್ತೋರ್ವನನ್ನು ಬೆಂಗಳೂರಿನ (Bengaluru) ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ
Advertisement