ಮೈಸೂರು: ಕೆಎಸ್‌ಆರ್‌ಟಿಸಿ (KSRTC) ಹಾಗೂ ಜೀಪ್ (Jeep) ನಡುವೆ ಭೀಕರ ಅಪಘಾತ (Accident) ನಡೆದ ಪರಿಣಾಮ ಚಾಲಕ ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು (Hunsur) ನಗರದಲ್ಲಿ ನಡೆದಿದೆ.
ಹುಣಸೂರು ನಗರದ ಅಯ್ಯಪ್ಪ ಸ್ವಾಮಿ ಬೆಟ್ಟದ ಬಳಿ ಘಟನೆ ಸಂಭವಿಸಿದ್ದು, ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪ್ ಹೆಚ್‌ಡಿ ಕೋಟೆಯಿಂದ ಬರುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ಕೂಲಿ ಕಾರ್ಮಿಕರು ಎಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು
Advertisement
Advertisement
ಅದೇ ರೀತಿ ಮೈಸೂರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮೈಸೂರಿನ ಜಲದರ್ಶಿನಿ ಪ್ರವಾಸ ಮಂದಿರದ ಬಳಿ ಘಟನೆ ನಡೆದಿದೆ. ಹುಣಸೂರಿನಿಂದ ಮೈಸೂರಿಗೆ ಬರುತಿದ್ದ ಸಂದರ್ಭ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ತಪ್ಪಿಸುವ ಸಲುವಾಗಿ ಒಂದು ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬಂದ ಮತ್ತೊಂದು ಬಸ್ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಮುಖ, ಕೈಕಾಲುಗಳಿಗೆ ಗಾಯವಾಗಿದೆ. ಘಟನೆಯಿಂದ ಹುಣಸೂರು-ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘತ – 50 ಮೀಟರ್ ಹಾರಿ ಬಿದ್ದ ಯುವತಿ ಗಂಭೀರ
Advertisement