ನವದೆಹಲಿ: ಬಿಹಾರ ಎಸ್‌ಐಆರ್‌ಗೆ ಪುರಾವೆಯಾಗಿ ಆಧಾರ್ ಕಾರ್ಡ್ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರ ಮರು ಸೇರ್ಪಡೆಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಭೌತಿಕವಾಗಿ ಸಲ್ಲಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಮತದಾರರು ಪಟ್ಟಿಯಲ್ಲಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ. ಇನ್ನು, ಎಸ್‌ಐಆರ್ ವೇಳೆ ವೋಟರ್‌ಲಿಸ್ಟ್ನಿಂದ 65 ಲಕ್ಷ ಮತದಾರರನ್ನು ಚುನಾವಣಾ ಆಯೋಗ ಡಿಲೀಟ್ ಮಾಡಿದೆ. ಈ ಬಗ್ಗೆ ಬಿಹಾರದ ರಾಜಕೀಯ ಪಕ್ಷಗಳು ಏಕೆ ಸಹಾಯ ಮಾಡಿಲ್ಲ ಅಂತಲೂ ಬಿಸಿಮುಟ್ಟಿಸಿದೆ.
ಬಿಹಾರದಲ್ಲಿ ಆಗಸ್ಟ್ 23, 24ಕ್ಕೆ ರಾಹುಲ್ ಗಾಂಧಿ ನೇತೃತ್ವದ ವೋಟರ್ ಅಧಿಕಾರ ಯಾತ್ರೆಗೆ ಡಿಸಿಎಂ ಡಿಕೆ ಶಿವಕುಮಾರ್ ಕೈಜೋಡಿಸಲಿದ್ದಾರೆ. 29ರಂದು ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಲಿದ್ದಾರೆ.