ಬೆಂಗಳೂರು: ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರದ ದಾಳಿಯ ಬಳಿಕ ಮೊದಲ ಬಾರಿಗೆ, ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಬೆಳ್ಳಂಬೆಳ್ಳಗ್ಗೆ 100ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿನ 9 ಕಡೆ ದಾಳಿ ಮಾಡಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸೇರಿ ಅವ್ಯವಾಹರದಲ್ಲಿ ತೊಡಗಿದ್ದ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ದಾಳಿ ನಡದದಿದೆ.
ರಘು ಬಿ ಎನ್.ಚಾಮರಾಜಪೇಟೆ, ಮೋಹನ್ ಮನೋರಾಯನಪಾಳ್ಯ, ಮನೋಜ್ ದೊಮ್ಮಲೂರು, ಮುನಿರತ್ನ ರತ್ನವೇಲು ಮಲ್ಲತ್ತಹಳ್ಳಿ, ತೇಜುತೇಜಸ್ವಿ ಆರ್‍ಆರ್ ನಗರ, ಅಶ್ವತ್ ಮುದ್ದಿನಪಾಳ್ಯ, ಲಕ್ಷ್ಮಣ ಚಾಮುಂಡೇಶ್ವರಿ ನಗರ, ಚಿಕ್ಕಹನುಮ್ಮಯ್ಯ ಮುದ್ದಿನಪಾಳ್ಯ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.