ಮಡಿಕೇರಿ: ನಿಮ್ಮ ಮನೆಯಲ್ಲಿ ನಾಳೆ ಎಸಿಬಿ ದಾಳಿ ನಡೆಯುತ್ತದೆ. ಇದನ್ನು ತಡೆಯಲು ಒಂದು ಕೋಟಿ ರೂ. ನೀಡುವಂತೆ ಅಪರಿಚಿತ ವ್ಯಕ್ತಿಯೋರ್ವನು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಕರೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಮಡಿಕೇರಿಯಲ್ಲಿ ಇರುವ ಶಾಸಕ ಕೆ.ಜಿ ಬೋಪಯ್ಯ ಅವರ ನಿವಾಸದಲ್ಲಿ ನಿನ್ನೆ ಸಂಜೆ 6:30ರ ಆಸುಪಾಸಿಗೆ ಕರೆ ಬಂದಿದೆ. ಅಪರಿಚಿತರೊಬ್ಬರು ಕರೆಮಾಡಿ ಎಸಿಬಿ ಕಡೆಯಿಂದ ಕರೆ ಮಾಡುತ್ತಿದ್ದೇವೆ. ತಮ್ಮ ಮೇಲೆ ಎಸಿಬಿ ದಾಳಿ ಮಾಡಲು ಸಜ್ಜಾಗುತ್ತಿದ್ದು, ಈ ಎಸಿಬಿ ದಾಳಿಯನ್ನು ತಡೆಹಿಡಿಯಲು ಒಂದು ಕೋಟಿ ರೂ. ನೀಡಬೇಕೆಂದು ಎಂದು ಕನ್ನಡದಲ್ಲೇ ಅಪರಿಚಿತ ವ್ಯಕ್ತಿ ಶಾಸಕರೊಂದಿಗೆ ಮಾತಾನಾಡಿದ್ದಾನೆ.
Advertisement
Advertisement
ಹಣ ನೀಡಿದೆ ಇದ್ದರೇ ಎಸಿಬಿ ದಾಳಿ ನಡೆಸುವುದು ಖಚಿತ ಎಂದು ತಿಳಿಸಿದ್ದಾನೆ. ಆಗ ಶಾಸಕ ಬೋಪಯ್ಯ ಮಾತಾನಾಡಿ, ಮನೆಯನ್ನು ಎಸಿಬಿ ದಾಳಿ ನಡೆಸಬಹುದು. ತಾನು ಯಾರಿಗೂ ಹಣ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿ ಫೋನ್ ಕರೆ ಕಟ್ ಮಾಡಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ
Advertisement
ಆದರೂ ಅಪರಿಚಿತ ವ್ಯಕ್ತಿ ಮತ್ತೆ ಬೇರೆ ಫೋನ್ ಮೂಲಕ ಕರೆ ಮಾಡಿ ಹಣದ ಬಗ್ಗೆ ವಿಚಾರ ಮಾಡಿದ್ದಾನೆ. ಆಗಲೂ ಶಾಸಕ ಬೋಪಯ್ಯ ಹಣ ನೀಡುವುದಿಲ್ಲ. ಎಸಿಬಿ ಅವರು ಬರಲಿ ತೊಂದರೆ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ. ಬೋಪಯ್ಯ ಇಂದು ಬೆಂಗಳೂರಿನ ಐಜಿ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಅಪರಿಚಿತ ಮೊಬೈಲ್ ಸಂಖ್ಯೆಯಲ್ಲಿ ಆಂಧ್ರದ ಝಹೀಬ್ ಖಾನ್ ಹೆಸರಿನಲ್ಲಿ ಖರೀದಿಯಾಗಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.