ಟೋಬಿ (Toby) ಸಿನಿಮಾ ಚೆನ್ನಾಗಿಲ್ಲ ಎಂದು ಯುವತಿಯೊಬ್ಬಳು ಥಿಯೇಟರ್ (Theatre) ಮುಂದೆ ಹೇಳಿದ ಕಾರಣಕ್ಕಾಗಿ ಯುವಕನೊಬ್ಬ ಆ ಹುಡುಗಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಆ ಹುಡುಗಿ ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಕ್ಕಾಗಿ ಥಿಯೇಟರ್ ನಿಂದ ಆಚೆ ಹೊರಡು ಎಂದು ಬೆದರಿಸಿದ್ದ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಿತ್ರದ ಕಥೆ ಬರೆದ ಟಿ.ಕೆ. ದಯಾನಂದ್ ಕ್ಷಮೆ ಯಾಚಿಸಿದ್ದರು. ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ದಯಾನಂದ್, ಆ ಹುಡುಗ ತಮ್ಮ ತಂಡದವನು ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ತಂಡದ ಪರವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. ಇದೀಗ ರಾಜ್ ಬಿ ಶೆಟ್ಟಿ (Raj B Shetty) ಕೂಡ ಕ್ಷಮೆ ಕೇಳಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:Breaking- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅತ್ಯುತ್ತಮ ನಟ ಅಲ್ಲು ಅರ್ಜುನ್, ನಟಿ ಆಲಿಯಾ ಭಟ್ ಮತ್ತು ಕೀರ್ತಿ ಸನನ್
ಸಿನಿಮಾ ಕೂಡ ವಿಮರ್ಶೆ ಮಾಡುವ ಮಾಧ್ಯಮ. ಸಾವಿರಾರು ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳು ಕೂಡ ಕೆಲವರಿಗೆ ಇಷ್ಟವಾಗಿರುವುದಿಲ್ಲ. ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುವ ಹಕ್ಕು ಇದೆ. ಯಾರನ್ನೂ ನಿಂದಿಸಬಾರದು. ಆ ಯುವತಿಗೆ ಬೈದ ಹುಡುಗ ನಮ್ಮ ತಂಡದವನು ಅಲ್ಲ. ಆದರೂ, ನಾನು ಮನಸಾರೆ ಆ ಹುಡುಗಿಗೆ ಕ್ಷಮೆ ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಟೋಬಿ ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಹಲವರು ಹಲವು ರೀತಿಯಲ್ಲಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ನಡುವೆ ಇಂಥದ್ದೊಂದು ಘಟನೆ ನಡೆದು, ಚಿತ್ರತಂಡವನ್ನು ಮುಜುಗರಕ್ಕೀಡು ಮಾಡಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]