ಡಮಾಸ್ಕಸ್: ಸಿರಿಯಾದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಕೇರಳ ಮೂಲದ ಶಂಕಿತ ಉಗ್ರನೊಬ್ಬ ಬಲಿಯಾಗಿದ್ದಾನೆ. ಅಬು ತಾಹಿರ್ ಬಲಿಯಾದ ಶಂಕಿತ ಉಗ್ರನಾಗಿದ್ದಾನೆ. ಈತ ಕೇರಳದ ಪಾಲ್ಛಾಟ್ ನಿವಾಸಿ ಎಂಬುದಾಗಿ ತಿಳಿದುಬಂದಿದೆ.
ಅಬು ತಾಹಿರ್, ಕಳೆದ 2013ರಲ್ಲಿ ಉಮ್ರಾಗೆ ತೆರಳಿದ್ದು, ಆ ಬಳಿಕ ತಾಯ್ನಾಡಿಗೆ ಮರಳಿಲ್ಲ. ಆದ್ರೆ ಇದೀಗ ಶಾರ್ಜಾದಲ್ಲಿರುವ ಸಂಬಂಧಿಕರೊಬ್ಬರಿಗೆ ಅಬುತಾಹಿರ್ ಮೃತಪಟ್ಟಿರುವ ಕುರಿತು ಏಪ್ರಿಲ್ 4 ರಂದು ಮೆಸೇಜ್ ಬಂದಿತ್ತು.
- Advertisement
ಮೆಸೇಜ್ ನಲ್ಲಿ `ಐಸಿಸ್ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಅಬು ತಾಹಿರ್ ಅಫ್ಗಾನಿಸ್ತಾನದ ನಂಗಾರ್ಹರ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ’ ಅಂತಾ ಬರೆದಿತ್ತು.
- Advertisement
ಇದಕ್ಕೂ ಮೊದಲು ಅಂದ್ರೆ ಫೆಬ್ರವರಿಯಲ್ಲಿ ಇದೇ ಸಂಘಟನೆಯ ಉಗ್ರನೊಬ್ಬ ಅಫ್ಘಾನಿಸ್ತಾನ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಬಲಿಯಾಗಿದ್ದನು. ಕಳೆದ ಒಂದು ವರ್ಷದಿಂದ ಕ್ರಿಶ್ಚಿಯನ್ ಹಾಗೂ ಹಿಂದೂ ಕುಟುಂಬದಿಂದ ಬಂದ ಸುಮಾರು 12 ಮಂದಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಇಂತಹ ಸಂಘಟನೆಗಳಿಗೆ ಸೇರುತ್ತಿದ್ದಾರೆ. ಇದರಲ್ಲಿ ಇಬ್ಬರು ಮೆಸೇಜ್ ಹಾಗೂ ವಾಯ್ಸ್ ಮೆಸೇಜ್ ಮೂಲಕ ತಾವು ಸಂಘಟನೆಗಳಿಗೆ ಸೇರುವ ಬಗ್ಗೆ ತಮ್ಮ ಕುಟುಂಬಕ್ಕೂ ತಿಳಿಸಿದ್ದಾರೆ ಅಂತಾ ವರದಿಯಾಗಿದೆ.