ಅಬುಧಾಬಿ: ಅಬುಧಾಬಿಯ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ತಿಳಿಯದೆ ನಿರ್ಲಕ್ಷಿಸಿ ಬಾಲಕಿಯ ಮನೆಗೆ ಭೇಟಿ ಕೊಟ್ಟು, ಆಕೆಯನ್ನು ಖುಷಿಪಡಿಸಿ ಸರಳತೆ ಮೆರೆದಿದ್ದಾರೆ.
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್-ಸಲ್ಮಾನ್ ಅವರೊಂದಿಗೆ ಭಾಗವಹಿಸಿದ್ದರು. ಅವರನ್ನು ಸ್ವಾಗತಿಸಲು ಪುಟ್ಟ ಪುಟ್ಟ ಬಾಲಕಿಯರು ಎರಡೂ ಕಡೆ ಸಾಲುಗಟ್ಟಿ ನಿಂತಿದ್ದರು.
Advertisement
زرت اليوم الطفلة عائشة محمد مشيط المزروعي وسعدت بالسلام عليها ولقاء أهلها. pic.twitter.com/XY3N3nU6Dd
— محمد بن زايد (@MohamedBinZayed) December 2, 2019
Advertisement
ಒಂದು ಕಡೆ ಸೌದಿಯ ರಾಜಕುಮಾರ ಸಲ್ಮಾನ್, ಇನ್ನೊಂದು ಕಡೆ ಅಬುಧಾಬಿಯ ರಾಜಕುಮಾರ ಅಲ್ ನಹ್ಯಾನ್ ನಡೆದು ಬರುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಅಲ್ ನಹ್ಯಾನ್ ಅವರ ಕೈಕುಲುಕಲು ಪ್ರಯತ್ನಿಸಿದಳು. ಹೀಗಾಗಿ ಬಿನ್-ಸಲ್ಮಾನ್ ಅವರು ಬರುತ್ತಿದ್ದ ಸಾಲಿನಲ್ಲಿ ನಿಂತಿದ್ದ ಬಾಲಕಿ ತಕ್ಷಣವೇ ಎದುರಿನ ಸಾಲಿನಲ್ಲಿ ಬಂದು ನಿಂತಳು. ಸಾಲಿನಲ್ಲಿ ನಿಂತಿದ್ದ ಅನೇಕ ಮಕ್ಕಳ ಕೈಕುಲುಕತ್ತ ಬಂದ ಅಲ್ ನಹ್ಯಾನ್ ಬಾಲಕಿ ಬಳಿ ಬರುತ್ತಿದ್ದಂತೆ ತಮ್ಮ ಗಮನವನ್ನು ಬೇರೆ ಕಡೆಗೆ ಹರಿಸಿ, ಅಲ್ಲಿಂದ ಮುಂದೆ ಸಾಗಿದರು. ಇದರಿಂದಾಗಿ ಬಾಲಕಿ ನಿರಾಸೆಗೊಂಡಿದ್ದಳು.
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಜಕುಮಾರ ಅಲ್ ನಹ್ಯಾನ್ ಅವರು ವಿಷಯ ತಿಳಿದು, ಬಾಲಕಿ ಆಯೆಷಾ ಮೊಹಮ್ಮದ್ ಮಶೀತ್ ಅಲ್ ಮಜೂರಿ ಮನೆಗೆ ತಲುಪಿ, ಅವಳನ್ನು ಭೇಟಿಯಾದರು. ಈ ವೇಳೆ ಬಾಲಕಿ ಆಯೆಷಾಗೆ ಮುತ್ತಿಟ್ಟು, ಆಕೆಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.
Advertisement
ರಾಜಕುಮಾರ ಅಲ್ ನಹ್ಯಾನ್ ಆಯೆಷಾ ಜೊತೆಗಿರುವ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಇಂದು ನಾನು ಬಾಲಕಿ ಆಯೆಷಾ ಮನೆಗೆ ಭೇಟಿ ನೀಡಿದ್ದೆ. ಅವಳ ಕುಟುಂಬವನ್ನು ಭೇಟಿಯಾಗಿದ್ದು ತುಂಬಾ ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ.
https://twitter.com/7XFIl/status/1201480698563059712