ರಾಯ್‍ಪುರ: ದಸರಾ ಪ್ರಯುಕ್ತ ದುರ್ಗಾದೇವಿಯ ಮೆರವಣಿಗೆ ಸಾಗುತ್ತಿದ್ದ ಭಕ್ತರ ಗುಂಪಿನ ಮೇಲೆ ಚಲಿಸಿದ ಕಾರಿನಿಂದಾಗಿ ಓರ್ವ ಮೃತಪಟ್ಟು 20 ಜನ ಗಾಯಗೊಂಡಿರುವ ದುರ್ಘಟನೆ ಛತ್ತೀಸ್‍ಗಢದ ಜಶ್‍ಪುರದಲ್ಲಿ ನಡೆದಿದೆ.
Advertisement
ಮೃತ ದುರ್ದೈವಿಯನ್ನು ಗೌರವ್ ಅಗರ್‍ವಾಲ್ ಎಂದು ಗುರುತಿಸಲಾಗಿದೆ. ನೂರಾರು ಜನ ದುರ್ಗಾದೇವಿಯ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಚಲಿಸಿದ ಪರಿಣಾಮ ಓರ್ವ ಮೃತಪಟ್ಟು 20 ಜನರಿಗೆ ಗಾಯಗಳಾಗಿವೆ. ಇದನ್ನೂ ಓದಿ: ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ
Advertisement
https://twitter.com/netaji_bond/status/1448978717103906818
Advertisement
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಮೃತಪಟ್ಟು 20 ಜನರಿಗೆ ಗಾಯಗಳಾಗಿ ಇಬ್ಬರ ಮೂಳೆ ಮರಿತಕ್ಕೊಳಗಾಗಿರುವ ಬಗ್ಗೆ ವೈದ್ಯಾಧಿಕಾರಿ ಜೇಮ್ಸ್ ಮಿಂಜ್ ಮಾಹಿತಿ ನೀಡಿದ್ದಾರೆ. ಕಾರು ಜನರಿಗೆ ಡಿಕ್ಕಿ ಹೊಡೆದು ಮುನ್ನುಗ್ಗುತ್ತಿದ್ದಂತೆ ಜನ ಕಾರಿನ ಹಿಂದೆ ಓಡಿ ಕಾರು ತಡೆದು ಕಾರಿಗೆ ಬೆಂಕಿ ಹಚ್ಚಿ ಕಾರಿನ ಚಾಲಕನಿಗೆ ಥಳಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 45 ಅಡಿ ಎತ್ತರದ ಪರಿಸರ ಸ್ನೇಹಿ ದುರ್ಗಾದೇವಿ ಮೂರ್ತಿ – ಫೋಟೋ ವೈರಲ್
Advertisement
This is the vehicle which ran over at least 25 people in Chhattisgarh, during Durga Visarjan.
As per locals and eye-witnesses, the Yellow packets found inside the car have contraband items inside them. Police yet to confirm. @ThePrintIndia https://t.co/TK1OqT7o5b pic.twitter.com/KOnkliPM5i
— Tanushree Pandey (@TanushreePande) October 15, 2021
ಮಧ್ಯ ಪ್ರದೇಶದ ನೋಂದಣಿ ಸಂಖ್ಯೆ ಹೊಂದಿರುವ ಕಾರು ಇದಾಗಿದ್ದು, ಇದರಲ್ಲಿ ಗಾಂಜಾ ಸಾಗಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಕಾರಿನ ಚಾಲಕ ಬಬ್ಲು ವಿಶ್ವಕರ್ಮ(21) ಮತ್ತು ಶಿಶುಪಾಲ್ ಸಾಹು(26) ಎಂಬವರನ್ನು ಬಂಧಿಸಿರುವುದಾಗಿ ಜಶ್‍ಪುರದ ಪೊಲೀಸ್ ವರಿಷ್ಠಾಧಿಕಾರಿ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.