– ಬಿಡುಗಡೆಯಾಯ್ತು ಜೂ.ಅಂಬಿಯ ಖಡಕ್ ಟೀಸರ್
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಟಿಸಿದ ಮೊದಲ ಚಿತ್ರ ‘ಅಮರ್’ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಅಥವಾ ಆಡಿಯೋ ಬಿಡುಗಡೆ ಮಾಡಬೇಕೆಂದು ಅಂಬರೀಶ್ ಆಸೆಪಟ್ಟಿದ್ದರು. ಈಗ ಅವರ ಆಸೆಯಂತೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಚಿತ್ರದ ಟೀಸರ್ ಶುರುವಾಗುವ ಮೊದಲೇ ಈ ಟೀಸರ್ ರನ್ನು ದಿವಂಗತ ಅಂಬರೀಶ್ ಅವರಿಗೆ ನಿರ್ಮಾಪಕ ಸಂದೇಶ್ ನಾಗರಾಜ್ ಅರ್ಪಿಸಿದ್ದಾರೆ. ಈ ಟೀಸರ್ ನಲ್ಲಿ ಅಭಿಷೇಕ್ ಆ್ಯಕ್ಷನ್ ಸೀನ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ನಾನ್ ಹೀರೋ ತರ ಅಲ್ಲ, ಹೀರೋನೇ ಎಂಬ ಖಡಕ್ ಡೈಲಾಗ್ ಹೇಳಿದ್ದಾರೆ.
ಅಂಬರೀಶ್ ನನ್ನ ಸಿನಿಮಾದಲ್ಲಿ ಇರುತ್ತಾರೆ. ಇನ್ನು ಮುಂದೆ ನಾನು ಯಾವ ಸಿನಿಮಾ ಮಾಡಿದರೂ ಅದರಲ್ಲಿ ಅಪ್ಪಾಜಿ ಇರುತ್ತಾರೆ ಎಂದು ಅಭಿಷೇಕ್ ಹೇಳಿದ್ದರು. ಹಾಗೆಯೇ ಅಮರ್ ಚಿತ್ರದಲ್ಲಿ ತಮ್ಮ ತಂದೆಯ ‘ಚಾನ್ಸೇ ಇಲ್ಲ, ನೋ ವೇ’ ಎಂಬ ಫೇಮಸ್ ಡೈಲಾಗ್‍ವನ್ನು ಹೇಳಿದ್ದಾರೆ. ಟೀಸರ್ ನಲ್ಲಿ ನಾಯಕಿಯ ಪಾತ್ರವನ್ನು ಪರಿಚಯಿಸದೇ ಗುಟ್ಟಾಗಿ ಇಡಲಾಗಿದೆ.
ಈ ಚಿತ್ರದ ಟೀಸರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, “ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ `ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ” ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ಪ್ರೀತಿಯ ತಮ್ಮ ಅಭಿ ಅಂಬರೀಷ್ ‘ಅಮರ್’ ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟೀಸರ್ ಈಗ ನಿಮ್ಮ ಮುಂದೆ. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಬರಮಾಡಿಕೊಳ್ಳಿ ???? @sumalathaAhttps://t.co/X1oMhOeHax pic.twitter.com/bGyM0jNlkQ
— Darshan Thoogudeepa (@dasadarshan) February 14, 2019
ಅಮರ್ ಚಿತ್ರದಲ್ಲಿ ಅಭಿಷೇಕ್‍ಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ಚಿತ್ರ ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರ ಆಗಿದ್ದು, ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದರೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv