ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂಜಾಬ್ ಕಿಂಗ್ಸ್ (Punjab Kings) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳ ನಡುವಿನ ಹಣಾಹಣಿ ವೀಕೆಂಡ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಅತ್ತ ಹೈದರಾಬಾದ್ ಗೆಲುವಿನ ದಾಖಲೆ ಒಂದು ಕಡೆಯಾದ್ರೆ, ಅಭಿಷೇಕ್ ಶರ್ಮಾ (Abhishek Sharma) ಅವರ ಸಿಡಿಲಬ್ಬರದ ಬ್ಯಾಟಿಂಗ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
Abhishek Sharma with his parents. ❤️ pic.twitter.com/KHYAggRZiK
— Mufaddal Vohra (@mufaddal_vohra) April 13, 2025
ಸನ್‌ರೈಸರ್ಸ್ ಪರ ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ತಂಡದವನ್ನು ಗೆಲುವಿನತ್ತ ಕೊಂಡೊಯ್ದರಲ್ಲದೇ ಹಲವು ದಾಖಲೆಗಳನ್ನ ನುಚ್ಚುನೂರು ಮಾಡಿದರು. ಹೌದು. ಅಭಿ ಸಿಡಿಸಿದ ಈ ಸ್ಪೋಟಕ ಶತಕದಿಂದ ಪಂಬಾಜ್ ಕಿಂಗ್ಸ್ ಅತಿಹೆಚ್ಚು ರನ್ ಚೇಸ್ ಮಾಡಿ ಗೆದ್ದ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜೊತೆಗೆ ಅಭಿ ಕೂಡ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ವೈಯಕ್ತಿಕ ರನ್ ಗಳಿಸಿದ ಟಾಪ್-3ನೇ ಆಟಗಾರನಾಗಿ ಹೊರಹೊಮ್ಮಿದರು, ಜೊತೆಗೆ ಹೈದರಾಬಾದ್ (Sunrisers Hyderabad) ತಂಡದ ಪರ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡರು. ಜೊತೆಗೆ ತೂಫಾನ್ ಶತಕ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲೂ ಅಭಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆ ದಾಖಲೆಗಳ ಪಟ್ಟಿ ಏನು ಅಂತ ನೋಡೋದಾದ್ರೆ… ಇದನ್ನೂ ಓದಿ: IPL 2025: ಆರ್‌ಸಿಬಿಗೆ ಆಗಿಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್ ಹೇಗಿದೆ?
ಒಂದೇ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಟಾಪ್-5 ಪ್ಲೇಯರ್ಸ್
* ಕ್ರಿಸ್ ಗೇಲ್ – 2013ರಲ್ಲಿ – 175 ರನ್ – 66 ಎಸೆತ
* ಬ್ರೆಂಡನ್ ಮೆಕಲಂ – 2008ರಲ್ಲಿ – 158 ರನ್ – 73 ಎಸೆತ
* ಅಭಿಷೇಕ್ ಶರ್ಮಾ – 2025 ರಲ್ಲಿ – 141 ರನ್ – 55 ಎಸೆತ
* ಕ್ವಿಂಟನ್ ಡಿಕಾಕ್ – 2022 ರಲ್ಲಿ – 140 ರನ್ – 70 ಎಸೆತ
* ಎಬಿ ಡಿವಿಲಿಯರ್ಸ್ – 2015 ರಲ್ಲಿ – 133 ರನ್ – 59 ಎಸೆತ
ತೂಫಾನ್ ಶತಕ ಬಾರಿಸಿದ ಟಾಪ್-5 ಆಟಗಾರರು ನೋಡಿ
* ಕ್ರಿಸ್ ಗೇಲ್ – 2013ರಲ್ಲಿ – 30 ಎಸೆತಗಳಲ್ಲಿ ಶತಕ
* ಯೂಸುಫ್ ಪಠಾಣ್ – 2010 – 37 ಎಸೆತಗಳಲ್ಲಿ ಶತಕ
* ಡೇವಿಡ್ ಮಿಲ್ಲರ್ – 2013ರಲ್ಲಿ – 38 ಎಸೆತಗಳಲ್ಲಿ ಶತಕ
* ಟ್ರಾವಿಸ್ ಹೆಡ್ – 2024ರಲ್ಲಿ – 39 ಎಸೆತಗಳಲ್ಲಿ ಶತಕ
* ಅಭಿಷೇಕ್ ಶರ್ಮಾ – 2025 – 40 ಎಸೆತಗಳಲ್ಲಿ ಶತಕ
ಅತಿಹೆಚ್ಚು ರನ್ ಚೇಸ್ ಮಾಡಿ ಗೆದ್ದ 2ನೇ ತಂಡ
* ಪಂಜಾಬ್ ಕಿಂಗ್ಸ್ – 262/2 ಕೆಕೆಆರ್ ವಿರುದ್ಧ
* ಸನ್‌ರೈಸರ್ಸ್ – 247/2 ಪಂಜಾಬ್ ಕಿಂಗ್ಸ್ ವಿರುದ್ಧ
* ರಾಜಸ್ಥಾನ್ ರಾಯಲ್ಸ್ – 226/6 ಪಂಜಾಬ್ ವಿರುದ್ಧ
* ರಾಜಸ್ಥಾನ್ ರಾಯಲ್ಸ್ – 224/8 ಕೆಕೆಆರ್ ವಿರುದ್ಧ
* ಮುಂಬೈ ಇಂಡಿಯನ್ಸ್ – 219/6 ಸಿಎಸ್‌ಕೆ ವಿರುದ್ಧ
ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಅಭಿಷೇಕ್ ಹೇಳಿದ್ದೇನು?
ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್, ಇದು ತುಂಬಾ ವಿಶೇಷವಾದ ದಿನ. ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ಇನ್ನು ಯುವರಾಜ್ ಸಿಂಗ್ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದೆ. ಇನ್ನು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು. ಸೂರ್ಯ, ಅಭಿಷೇಕ್ ಅವರಿಗೆ ಕೆಲವು ಸಲಹೆ ನೀಡಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಅಭಿಷೇಕ್ ಸಿಡಿಲಬ್ಬರದ ಆಟಕ್ಕೆ ಪಂಜಾಬ್ ಪಂಚರ್; ತವರಲ್ಲಿ ಹೈದರಾಬಾದ್‌ಗೆ ವಿಕೆಟ್‌ಗಳ ಭರ್ಜರಿ ಗೆಲುವು