ಅಭಿಷೇಕ್ ಅಂಬರೀಶ್ (Abhishek Ambarish) ಮತ್ತು ಅವಿವಾ ವಿವಾಹ ಮುಹೂರ್ತಕ್ಕೆ ಕ್ಷಣಗಣನೆ. ನೂತನ ಜೋಡಿಗಾಗಿ ಈಗಾಗಲೇ ಅರಮನೆ ಮೈದಾನ ಸಿಂಗಾರಗೊಂಡಿದ್ದು, ಅಭಿಷೇಕ್ ಜೆ.ಪಿ. ನಗರದ ತಮ್ಮ ನಿವಾಸದಿಂದ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಅರಮನೆ ಮೈದಾನದತ್ತ ಹೊರಟಿದ್ದಾರೆ. ಮದುವೆಗಾಗಿಯೇ (Marriage) ಹೊಸ ಕಾರನ್ನು ಖರೀದಿಸಿದೆ ಅಂಬಿ ಕುಟುಂಬ. ಇಂದು ಬೆಳಗ್ಗೆ 9.30 ಕ್ಕೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗುರು ಹಿರಿಯರ ನಿಶ್ಚಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದೆ.
Advertisement
ಸುಮಲತಾ ಅಂಬರೀಶ್ (Sumalatha) ಪುತ್ರ ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ (Aviva Bidappa) ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.
Advertisement
Advertisement
ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದ್ದು, ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
Advertisement
ಈಗಾಗಲೇ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಹೊಸ ಜೋಡಿ ಮಿಂಚಿರುವ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವಿವ ಡಿಸೈನ್ ಮಾಡಿರುವ ಧರಿಸಿನಲ್ಲಿ ಅಭಿ-ಅವಿವ ಹೇಗೆ ಕಾಣುತ್ತಾರೆ? ಮದುವೆ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಮೂಡಿಸಿದೆ.