CinemaDistrictsKarnatakaLatestMain PostSandalwood

2ನೇ ಚಿತ್ರ ರಿಲೀಸೇ ಆಗಿಲ್ಲ. 3, 4 ಮತ್ತು 5ನೇ ಸಿನಿಮಾ ಒಪ್ಪಿಕೊಂಡ ಯಂಗ್ ರೆಬೆಲ್ ಸ್ಟಾರ್

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಸಿನಿಮಾ ರಂಗದಲ್ಲೇ ಉಳಿಯುತ್ತಾರಾ ಅಥವಾ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಚರ್ಚೆ ಇತ್ತೀಚಿನ ದಿನಗಳಲ್ಲಿ ನಡೆದಿತ್ತು. ಮಗ ರಾಜಕೀಯ ಬರುವ ವಿಚಾರ ಅವನಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಸುಮಲತಾ ಅಂಬರೀಶ್ ಈ ಚರ್ಚೆಗೆ ಬೇರೆ ಆಯಾಮ ಕೊಟ್ಟಿದ್ದರು. ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ, ಪಕ್ಕಾ ಅವರು ಸಿನಿಮಾ ರಂಗದಲ್ಲಿ ನೆಲೆಯೂರುತ್ತಾರೆ ಎನ್ನುವುದು ಖಾತ್ರಿಯಾಗಿದೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

ಅಭಿಷೇಕ್ ಅಂಬರೀಶ್ ಅವರ ಮೊದಲ ಸಿನಿಮಾ ‘ಅಮರ್’ ಅವರ ವೃತ್ತಿ ಬದುಕಿಗೆ ಹೇಳಿಕೊಳ್ಳುವಂತಹ ಸಹಾಯವೇನೂ ಮಾಡಲಿಲ್ಲ. ಇದೀಗ ಶೂಟಿಂಗ್ ಆಗುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಅಭಿಷೇಕ್ ನಟನೆಯ ಎರಡನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ರಿಲೀಸ್ ಆಗೋಕೆ ಇನ್ನೂ ಟೈಮ್ ಇದೆ. ಈ ಮಧ್ಯೆ ಅಭಿಷೇಕ್ ಬರೋಬ್ಬರಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಅಭಿಷೇಕ್ ಒಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಈ ನಡುವೆ ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಕೂಡ ಒಂದು ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಕೃಷ್ಣ ಹೇಳಿರುವ ಕಥೆಯನ್ನು ಅಭಿಷೇಕ್ ಒಪ್ಪಿಕೊಂಡಿದ್ದಾರಂತೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

ಕೃಷ್ಣ ಮತ್ತು ಅಭಿಷೇಕ್ ಕಾಂಬಿನೇಷನ್ ಸಿನಿಮಾವಾದ ನಂತರ ಮದಗಜ ಖ್ಯಾತಿಯ ಮಹೇಶ್ ಕುಮಾರ್ ಕೂಡ ಅಭಿಷೇಕ್ ಅವರಿಗಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮಹೇಶ್ ಹೇಳಿದ ಕಥೆಯನ್ನೂ ಅಭಿಷೇಕ್ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಈಗಾಗಲೇ ನಿರೀಕ್ಷೆ ಮೂಡಿಸಿರುವುದರಿಂದ ಮತ್ತು ಸೂರಿ ವಿಭಿನ್ನವಾಗಿ ಸಿನಿಮ ಮಾಡಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಪಸರಿಸಿರುವುದರಿಂದ ಅಭಿಷೇಕ್ ಅವರಿಗೆ ಒಂದರ ಮೇಲೊಂದು ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಹೀಗಾಗಿ ರಾಜಕೀಯ ಕ್ಷೇತ್ರಕ್ಕಿಂತಲೂ ಸಿನಿಮಾ ರಂಗದಲ್ಲಿ ಅವರು ಗಟ್ಟಿಯಾಗಿ ನೆಲೆಯೂರುವ ಲಕ್ಷಣಗಳು ಕಾಣುತ್ತಿವೆ.

Leave a Reply

Your email address will not be published.

Back to top button