ಇಂದು ಡಾ. ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಅಭಿಷೇಕ್ ಅಂಬರೀಶ್ (Abhishek Ambarish) ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ. ಈ ಸಂದರ್ಭದಲ್ಲಿ ಅಭಿಷೇಕ್ ಒಂದು ಹೊಸ ವೀಡಿಯೋ (Video) ಮಾಡಿದ್ದು, ಇದರಲ್ಲಿ ಅವರ ಪತ್ನಿಯಾಗಲಿರುವ ಅವಿವಾ ಬಿದ್ದಪ್ಪ (Aviva Biddappa) ಸಹ ಕಾಣಿಸಿಕೊಂಡಿರುವುದು ವಿಶೇಷ.
ಈ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವಿವಾ, ಅಂಬರೀಷ್ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ವೈರಲ್ (Viral) ಆಗಿದೆ. ಇದನ್ನೂ ಓದಿ:‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್
ಅಂಬರೀಶ್ ಅವರ ಸಿನಿಮಾದ ಜನಪ್ರಿಯ ಗೀತೆಗಳಾದ ‘ಒಲವಿನ ಉಡುಗೊರೆ’, ‘ಚಳಿ ಚಳಿ ತಾಳೆನು ಈ ಚಳಿಯ’, ‘ಮಂಡ್ಯದ ಗಂಡು’ ಹಾಗೂ ‘ಹೇ ಜಲೀಲಾ, ಕನ್ವರ್ ಲಾಲಾ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ನಾಲ್ಕು ಗೀತೆಗಳಿಗೆ ಅಭಿ ಮತ್ತು ಅವಿವಾ ಜೋಡಿ ಹೆಜ್ಜೆ ಹಾಕಿದೆ. ಒಲವಿನ ಉಡುಗೊರೆಯಿಂದ ಶುರುವಾಗುವ ವಿಡಿಯೋ ಅಂಬಿ ಅವರ ಕೊನೆಯ ಸಿನಿಮಾದ ಹೇ ಜಲೀಲ ಹಾಡಿನ ಮೂಲಕ ಕೊನೆಗೊಳ್ಳುತ್ತದೆ.
ಒಲವಿನ ಉಡುಗೊರೆ ಹಾಡಿನಲ್ಲಂತೂ ಯಂಗ್ ರೆಬಲ್ ಸ್ಟಾರ್ ಸಖತ್ ಆಗಿ ಕಾಣುತ್ತಾರೆ. ಚಳಿ ಚಳಿ ತಾಳೆನು ಹಾಡಿಗೆ ಅವಿವಾ ಸಖತ್ ಎಕ್ಸ್ ಪ್ರೆಷನ್ ನೀಡಿದ್ದಾರೆ. ಮಂಡ್ಯದ ಗಂಡು ಹಾಡಿಗೆ ಬುಲೆಟ್ ಏರಿ ಬರುವ ಅಭಿಷೇಕ್, ಜಲೀಲ ಹಾಡಿಗೆ ಥೇಟ್ ಅಪ್ಪನಂತೆಯೇ ಸ್ಟೆಪ್ ಹಾಕಿದ್ದಾರೆ. ಎರಡು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವಿವಾ, ಎರಡರಲ್ಲೂ ಸೂಪರ್ ಆಗಿ ಕಾಣುತ್ತಾರೆ.
ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಷೇಕ್, ಜೂನ್ ತಿಂಗಳಲ್ಲಿ ಅವೀವಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.