Bengaluru CityDistrictsKarnatakaLatestLeading NewsMain Post

ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ – ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

ಬೆಂಗಳೂರು: ಇವತ್ತಿನಿಂದ ಆಪರೇಷನ್ ಹಳೆ ಮೈಸೂರು ಚಾಪ್ಟರ್ 1 ಶುರುವಾಗಿದೆ. ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ ಹಾಕಿದ್ದು, ಮತ್ತೆ ಅಂಬಿ ಫ್ಯಾಮಿಲಿ ಮಂಡ್ಯ ಅಖಾಡಕ್ಕೆ ಇಳಿದರೆ ರಣಕಣ ಗ್ಯಾರಂಟಿ. ಹಾಗಾದರೆ ಸುಮಲತಾ ನಡೆ ಏನು? ಪುತ್ರನನ್ನ ರಾಜಕೀಯಕ್ಕೆ ಎಂಟ್ರಿ ಕೊಡಿಸ್ತಾರಾ ಎಂಬ ಕುತೂಹಲ ಇದೆ.

ಮಂಡ್ಯದಲ್ಲಿ ಯುವ ನಾಯಕತ್ವ ಬರುತ್ತೆ ಎಂದು ಸಿಎಂ ಸುಳಿವು ಕೊಟ್ಟ ಬೆನ್ನಲ್ಲೇ ಸಕ್ಕರೆ ನಗರಿಯಲ್ಲೀಗ ಅಂಬಿ ನೆನಪು. ಅಂಬರೀಷ್ ಚುನಾವಣೆ ಅಖಾಡದಲ್ಲಿ ಇರ್ತಾರೆ ಅಂದರೆ ಅದರ ಖದರ್ ಬೇರೆಯೇ ಇರುತ್ತಿತ್ತು. ಅಂಬಿ ಮಂಡ್ಯದ ಗಂಡಾಗಿ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಸಹ ಕಂಡಿದ್ದರು. ಇದೀಗ ಅಂಬರೀಷ್ ಫ್ಯಾಮಿಲಿಯನ್ನೇ ಬಿಜೆಪಿ ಕರೆತರಲು ನಾನಾ ರೀತಿಯ ತಂತ್ರಗಾರಿಕೆ ಶುರುವಾಗಿದೆ. ಅಭಿಷೇಕ್ ಕೂಡ ರಾಜಕೀಯಕ್ಕೆ ಎಂಟ್ರಿ ಮಾಡಿಸಲು ಬಿಜೆಪಿಯಿಂದ ಮಹಾ ಪ್ಲ್ಯಾನ್ ನಡೆದಿದೆ. ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ ಎಂದು ಸಿಎಂ ಹೇಳಿರುವುದರ ಹಿಂದೆ ಅಂಬರೀಷ್ ಅವರ ಮಗ ರಾಜಕೀಯ ಎಂಟ್ರಿ ಇದೆಯಾ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನ ಲಾಭಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಚಾರ್ಯ

sumalatha ambarish

ಅಂದಹಾಗೆ ತಂದೆಯ ಜಾಗಕ್ಕೆ ಪುತ್ರನಿಗೆ ಪಟ್ಟಾಭಿಷೇಕ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದರೂ ಬಿಜೆಪಿಯ ಆ ಆಪರೇಷನ್‍ಗೆ ಅಂಬಿ ಫ್ಯಾಮಿಲಿ ಒಪ್ಪಿಬಿಡುವುದು ಅಷ್ಟು ಸುಲಭವೂ ಅಲ್ಲ. ಮದುವೆ ವೇಳೆ ಸಿಎಂ ಜೊತೆ ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗಿದ್ದಾಗ ಬಿಜೆಪಿ ಆಹ್ವಾನವನ್ನು ಕೊಟ್ಟಿರೋದನ್ನ ಸುಮಲತಾ ಒಪ್ಪಿಕೊಂಡಿದ್ದರು. ಆದರೆ ಕ್ಷೇತ್ರದ ಕಾರ್ಯಕರ್ತರು, ಜನರ ಅಭಿಪ್ರಾಯ ಪಡೆದು ತೀರ್ಮಾನ ಎಂದಿದ್ದರು. ಇದನ್ನೂ ಓದಿ: ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

ಈ ನಡುವೆ ಮದ್ದೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಗೆ ಕಳೆದ 2021 ಸೆಪ್ಟಂಬರ್‍ನಲ್ಲಿ ಮಾತನಾಡಿದ್ದ ಅಭಿಷೇಕ್ ಅಂಬರೀಷ್ ಅಭಿಮಾನಿಗಳ ಜೊತೆಯಲ್ಲಿ ಇರಬೇಕು ಎಂಬ ಆಸೆ ಇರುತ್ತೆ. ಇಲ್ಲಿ ತನಕ ಅಭಿಮಾನಿಗಳು ನಮ್ಮನ್ನ ಬೆಳೆಸಿದ್ದಾರೆ, ಮುಂದೆಯೂ ಬೆಳೆಸ್ತಾರೆ. ಮುಂದೇನಾಗುತ್ತೋ ನೋಡೋಣ ದೇವರ ಇಚ್ಛೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟು ಹಾಕಿದ್ದಾರೆ.

ಒಟ್ಟಿನಲ್ಲಿ ಅಂಬಿ ಅಡ್ಡಾದಿಂದಲೇ ಆಪರೇಷನ್ ಓಲ್ಡ್ ಮೈಸೂರು ಶುರುವಾಗಿದ್ದು, ಇವತ್ತು ಮಂಡ್ಯದಿಂದ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಮುಂದೆ ಎರಡನೇ ಹಂತದಲ್ಲಿ ಅಭಿಷೇಕ್ ರಾಜಕೀಯ ಎಂಟ್ರಿಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

Leave a Reply

Your email address will not be published.

Back to top button