ನಿನ್ನೆಯಷ್ಟೇ ಮೈಸೂರಿನಲ್ಲಿ (Mysore) ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಲೋಕಾರ್ಪಣೆ ಆಗಿದೆ. ಅದ್ಧೂರಿಯಾಗಿ ನಡೆದ ಈ ಸಮಾರಂಭದ ನಂತರ ಬೆಂಗಳೂರಿನ ಅಭಿಮಾನ (Abhimana Studio) ಸ್ಟುಡಿಯೋದಲ್ಲಿರುವ ಪುಣ್ಯಭೂಮಿಯ ಕುರಿತಾಗಿ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಅಭಿಮಾನ ಸ್ಟುಡಿಯೋದಲ್ಲಿರುವ ಪುಣ್ಯಭೂಮಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.
Advertisement
ವಿಷ್ಣುವರ್ಧನ್ ಅವರ ಕುಟುಂಬದವರು ಒಪ್ಪಿದರೆ ಅಭಿಮಾನ ಸ್ಟುಡಿಯೋದಲ್ಲಿರುವ ಸಮಾಧಿಯನ್ನು ತೆರವು ಮಾಡಬಹುದು ಎಂದು ಕೋರ್ಟ್ ಹೇಳಿದೆ ಅನ್ನುವ ವಿಚಾರವನ್ನು ನಾವೂ ಬೇರೆಯವರಿಂದ ಕೇಳಿ ತಿಳಿದುಕೊಂಡಿದ್ದೇವೆ. ಕೋರ್ಟ್ ಆಗಲಿ, ವಕೀಲರಾಗಲಿ ಅಥವಾ ಅಭಿಮಾನ ಸ್ಟುಡಿಯೋಗೆ ಸಂಬಂಧಪಟ್ಟವರಾಗಲಿ ಯಾರೂ ನಮಗೆ ಈ ವಿಷಯ ತಿಳಿಸಿಲ್ಲ ಮತ್ತು ಚರ್ಚೆ ಕೂಡ ಮಾಡಿಲ್ಲ. ಆದರೆ, ಅಪ್ಪಾಜಿ ಅವರ ಸಮಾಧಿ ಅಲ್ಲಿಯೇ ಇರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ವಿಷಯದಲ್ಲಿ ನಾನು ಕೂಡ ಅಭಿಮಾನಿಗಳ ಪರವಾಗಿಯೇ ನಿಲ್ಲುತ್ತೇನೆ ಎಂದು ಅನಿರುದ್ಧ ಮಾತನಾಡಿದರು. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ
Advertisement
Advertisement
ಫೆಬ್ರವರಿ 3ಕ್ಕೆ ಸಮಾಧಿ ಕುರಿತಾದ ಕೇಸ್ ಕೋರ್ಟ್ ಮುಂದೆ ಬರಲಿದ್ದು, ಅಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನುವ ಸುದ್ದಿ ದಟ್ಟವಾಗಿದೆ. ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಈ ಹಿಂದೆ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಬಾಲಣ್ಣ ಅವರ ಕುಟುಂಬದ ಕಾರ್ತಿಕ್ ಎನ್ನುವವರು ಕೋರ್ಟ್ ಮುಂದೆ ಸಮಾಧಿಯನ್ನು ತೆರವುಗೊಳಿಸುವ ಕುರಿತು ಕೇಳಿಕೊಂಡಿದ್ದಾರೆ. ಫೆಬ್ರವರಿ 3 ರಂದು ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ಸಮಾಧಿ ತೆರವು ಮಾಡಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನೂ ಅವರು ನೀಡಿದ್ದರು.
Advertisement
ಇದೇ ಫೆಬ್ರವರಿ 3ಕ್ಕೆ ವಿಷ್ಣುವರ್ಧನ್ ಸಮಾಧಿ ಅಭಿಮಾನ ಸ್ಟುಡಿಯೋದಲ್ಲಿ ಇರಬೇಕಾ ಅಥವಾ ತೆರವುಗೊಳಿಸಬೇಕಾ ಎನ್ನುವ ತೀರ್ಪು ಹೊರಬರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ ಸಮಾಧಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವ ಎಲ್ಲ ಪ್ರಯತ್ನವನ್ನೂ ವಿಷ್ಣುವರ್ಧನ್ ಅಭಿಮಾನಿಗಳು ಮಾಡುತ್ತಿದ್ದಾರೆ. ಅದಕ್ಕೆ ಅನಿರುದ್ಧ ಕೂಡ ಸಾಥ್ ನೀಡುವುದಾಗಿ ಮೈಸೂರಿನಲ್ಲಿ ನಿನ್ನೆ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k