ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ(Abhijeet Dipke) ಅವರನ್ನು ದೆಹಲಿ ಪೊಲೀಸರು(Delhi Police) ಶುಕ್ರವಾರ ಅವರ ಮನೆಯಲ್ಲೇ ವಶಕ್ಕೆ ಪಡೆದಿದ್ದಾರೆ.
ದೆಹಲಿಯಲ್ಲಿ ಆಯೋಜಿಸಲಾಗಿದ್ದ ‘ಲೆಹ್ರಾ ದೋ ತಿರಂಗಾ’ ರ್ಯಾಲಿ ಆರಂಭವಾಗಲು ಕೆಲವೇ ನಿಮಿಷಗಳಿರುವಾಗ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲು ಇತ್ತೀಚೆಗೆ ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಆಗಮಿಸಿದ ಬೆನ್ನಲ್ಲೇ ದಿಪ್ಕೆ ಅವರನ್ನು ಮೊದಲ ಬಾರಿಗೆ ವಶಕ್ಕೆ ಪಡೆಯಲಾಗಿತ್ತು.
ಅಕ್ಟೋಬರ್ 12 ರಂದು ದೆಹಲಿಯ ಐತಿಹಾಸಿಕ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ತೆರವುಗೊಳಿಸಲಾಗಿತ್ತು. ಮರುದಿನ, ಅಕ್ಟೋಬರ್ 13 ರಂದು ರಾಷ್ಟ್ರಧ್ವಜ ಹಿಡಿದು ಜಂತರ್ ಮಂತರ್ ಪ್ರವೇಶಿಸಿದ ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಪೊಲೀಸರು ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಬಂಧನವನ್ನು ವಿರೋಧಿಸಿ ತಿರಂಗಾ ಯಾತ್ರೆಗೆ ಕರೆ ನೀಡಲಾಗಿತ್ತು.
#WATCH | Delhi | As CJP Founder Abhijeet Dipke leaves from the residence of NCP-SCP spokesperson Anish Gawande, a police official says, “We are placing you under preventive detention. Section 163 is in force in Connaught Place. You are being detained…”
CJP has called for ‘Lehra Do Tiranga’ protest at Central Park in Connaught Place today.
— ANI (@ANI) October 16, 2026
ಶುಕ್ರವಾರ ಬೆಳಿಗ್ಗೆ ರ್ಯಾಲಿ ಹೊರಡುವ ಮುನ್ನವೇ ದಿಪ್ಕೆ ಅವರ ಮನೆಗೆ ಆಗಮಿಸಿದ ದೆಹಲಿ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163ರ ಅಡಿಯಲ್ಲಿ ಮುನ್ನೆಚ್ಚರಿಕಾ ನೋಟಿಸ್ ಜಾರಿ ಮಾಡಿದರು. ದೆಹಲಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಹಾಗೂ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಈ ತಿರಂಗಾ ಯಾತ್ರೆಗೆ ಯಾವುದೇ ಅನುಮತಿ ನೀಡಿಲ್ಲ. ಅನುಮತಿಯಿಲ್ಲದೆ ಯಾತ್ರೆ ನಡೆಸಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಪೊಲೀಸರು ನೋಟಿಸ್ನಲ್ಲಿ ಎಚ್ಚರಿಸಿದ್ದರು.
ಗಾಂಧೀಜಿಯವರ ಭಾವಚಿತ್ರವಿದ್ದ ಬಿಳಿ ಟೀ-ಶರ್ಟ್ ಧರಿಸಿ, ಭುಜದ ಮೇಲೆ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಮನೆಯ ಸೋಫಾದ ಮೇಲೆ ಕುಳಿತಿದ್ದ ದಿಪ್ಕೆ, “ನನ್ನ ಮೇಲೆ ನೀವು ಎಂತಹ ಆರೋಪ ಹೊರಿಸುತ್ತಿದ್ದೀರಿ ಎಂದು ನೋಟಿಸ್ ಪತ್ರಗಳನ್ನು ಪರಿಶೀಲಿಸುತ್ತಾ ಪೊಲೀಸರೊಂದಿಗೆ ನೇರ ವಾಗ್ವಾದ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
How many will the Modi-Shah put under arrest?
Abhijeet’s detention is gross violation of his rights. Every arrest this government makes more youth will hit the streets! https://t.co/rb0vqyBkbR
— Cockroach Janta Party – CJP (@Cockroachisback) October 16, 2026
ಅನುಮತಿಯಿಲ್ಲದೆ ಜನರನ್ನು ಸೇರಿಸಿ ರ್ಯಾಲಿ ನಡೆಸುವುದು ಕಾನೂನುಬಾಹಿರ ಹಾಗೂ ರಾಷ್ಟ್ರಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ಸ್ಪಷ್ಟಪಡಿಸಿದ ನಂತರ, ಮುನ್ನೆಚ್ಚರಿಕಾ ಕ್ರಮವಾಗಿ ದಿಪ್ಕೆ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಷರತ್ತು ಏನಿತ್ತು?
ಶನಿವಾರ ವಿಮಾನದ ಒಳಗಡೆಯೇ ಬಂಧನಕ್ಕೆ ಒಳಗಾಗಿದ್ದ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಮುಂದಿನ ಒಂದು ವರ್ಷದವರೆಗೆ (12 ತಿಂಗಳು) ಯಾವುದೇ ರೀತಿಯಲ್ಲಿ ಶಾಂತಿ ಭಂಗ ಉಂಟುಮಾಡುವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತು ವಿಧಿಸಿತ್ತು. ಶಾಂತಿ ಮತ್ತು ಉತ್ತಮ ನಡತೆಯನ್ನು ಕಾಯ್ದುಕೊಳ್ಳಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ತಲಾ 50,000 ರೂ. ಮೊತ್ತದ ಶ್ಯೂರಿಟಿ ಬಾಂಡ್ (Bail Bond) ಅನ್ನು ಪಡೆದುಕೊಳ್ಳಲಾಗಿತ್ತು.

