Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | `ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ

Cinema

`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ

Public TV
Last updated: April 13, 2026 7:47 am
Public TV
Share
3 Min Read
Asha Bhosle 3
SHARE

– ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ

ಮುಂಬೈ: ಆಶಾ ಭೋಸ್ಲೆ ಅವರು ಬರೋಬ್ಬರಿ 80 ವರ್ಷದ ತಮ್ಮ ಗಾಯನದ ಬದುಕನ್ನು ತೊರೆದು, ಹಾಡು ನಿಲ್ಲಿಸಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳಿಗೆ ಈಗ ಬರೀ ಶೋಕಗೀತೆಯೇ ಕೇಳಿಸುತ್ತಿದೆ. ಇಂದು (ಏ.12) ಸಂಜೆ 4 ಗಂಟೆಗೆ ಮುಂಬೈನ  (Mumbai) ಶಿವಾಜಿ  ಪಾರ್ಕ್‌ನಲ್ಲಿ ಆಶಾ ಭೋಸ್ಲೆ (Asha Bhosle) ಅವರ ಅಂತ್ಯಕ್ರಿಯೆ ನಡೆಯಲಿದೆ.

ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಿನಿಮಾದ ಸಂಗೀತ ಲೋಕದ ಉಸಿರಾಗಿದ್ದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರು 10ನೇ ವಯಸ್ಸಿಗೆ ಹಾಡಲು ಶುರು ಮಾಡಿದ್ದರು. ವಿವಿಧ ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 8 ದಶಕಗಳ ಸುಂದರ ಬದುಕಿನ ಯಾನ ಮುಗಿಸಿದ ಸ್ವರ ಸಾಮ್ರಾಜ್ಞಿ ನಿನ್ನೆ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇದನ್ನೂ ಓದಿ: 10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ

ಶನಿವಾರ ಹೃದಯ ಸ್ತಂಭನದಿಂದ ಆಶಾ ಭೋಸ್ಲೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಆಶಾ ಭೋಸ್ಲೆ ಶಕ್ತಿಯುತ ಧ್ವನಿಗೆ ಜಗತ್ತೇ ಮರುಳಾಗಿತ್ತು. ಅವರ ಹೆಸರು ಕೇಳುತ್ತಿದ್ದಂತೆಯೇ ತಕ್ಷಣ ನಮಗೆ ಕಿವಿಗೆ ಮಾರ್ಧವ ಹಾಗೂ ಮಾದಕದ ಒಂದು ಧ್ವನಿ ಸುಳಿದು ತಾಗುತ್ತದೆ. ಅವರು ಮಧುರ ಗೀತೆಯಿಂದ ಹಿಡಿದು ಮಾದಕ ಗೀತೆಯನ್ನು ಹಾಡಿದ್ದರು. 10ನೇ ವಯಸ್ಸಿನಲ್ಲಿ ಚಲಾ ಚಲ್ ನವ್ ಬಾಲಾ ಎಂಬ ಮರಾಠಿ ಸಿನಿಮಾಗೆ ಹಾಡು ಹಾಡುವ ಮೂಲಕ ತಮ್ಮ ಗಾಯನ ಬದುಕು ಆರಂಭಿಸಿ, ನಂತರ ಹಿಂದಿರುಗಿ ನೋಡಲೇ ಇಲ್ಲ.

1950ರ ದಶಕದಲ್ಲಿ ತಮ್ಮ ಕೆರಿಯರ್‌ನ ತುತ್ತತುದಿಗೆ ಏರಿದರು. ಕಾಲಾನಂತರದಲ್ಲಿ, ಅವರು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದರು. ದಮ್ ಮಾರೋ ಧಮ್.. ಯೇ ಮೇರಾ ದಿಲ್ ಪ್ಯಾರ ಕಾ ದಿವಾನಾ.. ರಂಗೀಲಾರೆ ರೀತಿಯ ಮಾದಕ ಹಾಡುಗಳ ಜೊತೆ ಚುರಾಲಿಯಾ ಹೈ ತುಮ್ನೇ.. ರಾಧಾ ಕೈಸೇನ ಜಲೆದಂತ ಮಾಧುರ್ಯ ಭರಿತ ಹಾಡುಗಳನ್ನು ಕೂಡ ದಿವ್ಯ ಕಂಠದ ಗಾಯಕಿ ಹಾಡಿದ್ದಾರೆ.ಇದನ್ನೂ ಓದಿ: ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ

ಭಾರತದ ಗಾನಕೋಗಿಲೆ ಲತಾ ಮಂಗೇಶ್ವರ್ ಅವರ ಸಹೋದರಿಯೇ ಆಶಾ ಭೋಸ್ಲೆ. ಲತಾ ಮಂಗೇಶ್ವರ್ ಮೆಲೋಡಿ ಕ್ವೀನ್ ಅಂತ ಖ್ಯಾತಿ ಪಡೆದ್ರೆ, ಆಶಾ ಭೋಸ್ಲೆ ತಮ್ಮದೇ ಬೇರೆ ಛಾಪು ಮೂಡಿಸಿದ್ರು. ಪಾಪ್ ಗಾಯನದಲ್ಲಿ ಹೆಸರುವಾಸಿಯಾದ್ರು. ಜಗತ್ತು ಆಶಾ ಭೋಸ್ಲೆಯವರನ್ನ ಕ್ವೀನ್ ಆಫ್ ಇಂಡಿಪಾಪ್ ಎಂದು ಕರೆಯಿತು. ಅಂದ್ರೆ ಭಾರತೀಯ ಪಾಪ್ ಜಗತ್ತಿನ ರಾಣಿ ಎಂದೇ ಖ್ಯಾತಿಯನ್ನು ಆಶಾ ಅವರು ಪಡೆದಿದ್ದರು. ನೂರಾರು ಪ್ರಶಸ್ತಿಗ ಅವರನ್ನು ಹುಡುಕಿಕೊಂಡು ಬಂದಿದ್ದವು. ಆಶಾ ಭೋಸ್ಲೆ ಅವರು ಏಳು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ, ಎರಡು ರಾಷ್ಟ್ರೀಯ ಅವಾರ್ಡ್ಗಳನ್ನು ಪಡೆದುಕೊಂಡಿದ್ದರು. 1981ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು. 1988ರಲ್ಲಿ ಇಜಾಜತ್ ಚಿತ್ರಕ್ಕಾಗಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. 2000ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮತ್ತು 2008ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕೃತರಾಗಿದ್ದರು.

ಭೀಮಸೇನ್ ಜೋಶಿಯವರ ಹಾಡು ಅಂದ್ರೆ ಆಶಾ ಭೋಸ್ಲೆಯವರಿಗೆ ಅಚ್ಚುಮೆಚ್ಚು. ಆಶಾ ಭೋಸ್ಲೆ ಯಾವಾಗಲೂ ತಮ್ಮನ್ನು ತಾವು ನಿತ್ಯ ವಿದ್ಯಾರ್ಥಿ ಎಂದು ಕರೆದುಕೊಳ್ಳುತ್ತಿದ್ದರು. ನಾನು ಹಾಡುಗಳನ್ನು ಕೇಳಬೇಕು ಎಂದುಕೊAಡರೆ ಪಂಡಿತ ಭೀಮಸೇನ ಜೋಷಿ ಅವರ ಹಾಡುಗಳನ್ನು ಕೇಳುತ್ತೇನೆ. ಆ ಮೂಲಕ ನಾನು ನನ್ನ ಗಾಯನದ ಸಾಮರ್ಥ್ಯವನ್ನು ಅಭ್ಯಾಸ ಮಾಡಿ ಸುಧಾರಿಸಿಕೊಳ್ಳುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇನ್ನು ಅವರಿಗೆ ಗಜಲ್‌ಗಳೆಂದ್ರೆ ಪಂಚಪ್ರಾಣ. ಅದರಲ್ಲೂ ಗುಲ್ಜಾರ್ ಅವರ ಗಜಲ್‌ಗಳು ಆಶಾ ಅವರಿಗೆ ತುಂಬಾ ಇಷ್ಟ. ಆರ್‌ಡಿ ಬರ್ಮನ್ ಅವರ ಸಂಗೀತದಲ್ಲಿ ಆಶಾಜೀ ಅನೇಕ ಹಾಡುಗಳನ್ನು ಹಾಡಿದ್ದಾರೆ. ಇನ್ನು ಕನ್ನಡದ ಹಾಡುಗಳಿಗೂ ಆಶಾ ಬೋಸ್ಲೆ ದನಿ ಆಗಿದ್ದಾರೆ. ಆಶಾ ಬೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಮಹಾರಾಷ್ಟç ಸಿಎಂ ಫಡ್ನವೀಸ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. ಹಾಡುಹಕ್ಕಿಯ ಅಂತಿಮ ದರ್ಶನ ಪಡೆದು ಅಲ್ವಿದಾ ಹೇಳಲಿದ್ದಾರೆ.ಇದನ್ನೂ ಓದಿ: ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

TAGGED:Asha BhosleFuneralmumbaiplayback singerಅಂತ್ಯಕ್ರಿಯೆಆಶಾ ಭೋಂಸ್ಲೆಮುಂಬೈಹಿನ್ನೆಲೆ ಗಾಯಕಿ
Share This Article
Facebook Whatsapp Whatsapp Telegram

Cinema news

Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post
Asha Bhosle 2
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
Cinema Latest Main Post National
Actor Harish
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತ – ಚಿತ್ರನಟ ಹರೀಶ್ ಸ್ಥಳದಲ್ಲೇ ಸಾವು
Cinema Crime Karnataka Kodagu Latest Sandalwood Top Stories
Asha Bhosle and Narendra Modi
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ
Bollywood Cinema Latest Main Post National

You Might Also Like

Virat Kohli 1
Cricket

PVR ಆರ್ಭಟ, ತವರಲ್ಲೇ ಮುಂಬೈಗೆ ನೀರು ಕುಡಿಸಿದ ಬೆಂಗಳೂರು – ಆರ್‌ಸಿಬಿಗೆ 18 ರನ್‌ಗಳ ಜಯ

Public TV
By Public TV
8 hours ago
Donald Trump 1
Latest

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಹಾರ್ಮುಜ್ ದಾಟದೇ ಯೂಟರ್ನ್‌ ಹೊಡೆದ 2 ಪಾಕ್‌ ತೈಲ ಟ್ಯಾಂಕರ್‌ಗಳು

Public TV
By Public TV
9 hours ago
MALLIKARJUN KHARGE NARENSRA MODI
Latest

33% ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಕೋರಿದ ಮೋದಿ – ಸರ್ವಪಕ್ಷ ಸಭೆಗೆ ಖರ್ಗೆ ಆಗ್ರಹ

Public TV
By Public TV
9 hours ago
02 11
Latest

ಬಿಗ್‌ ಬುಲೆಟಿನ್‌ 12 April 2026 ಭಾಗ-2

Public TV
By Public TV
9 hours ago
Rahul Gandhi 3
Latest

ಸಮಾನತೆ ಇರಬಾರದು ಅನ್ನೋ ಕಾರಣಕ್ಕೆ ಸಂವಿಧಾನ ಮುಗಿಸುವುದು RSS, ಬಿಜೆಪಿಯ ಮುಖ್ಯ ಉದ್ದೇಶ: ರಾಗಾ ಕಿಡಿ

Public TV
By Public TV
9 hours ago
Virat Kohli IPL 2026
Cricket

ಹೆಲ್ಮೆಟ್‌, ಗ್ಲೌಸ್‌ ಎಸೆದು ಕೊಹ್ಲಿ ಆಕ್ರೋಶ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?