ಹಿರಿಯ ನಟ, ನಿರ್ದೇಶಕ ಕಾಶಿನಾಥ್ (Kashinath) ಅವರ ಪುತ್ರ ಅಭಿಮನ್ಯು ನಟಿಸಿರುವ ಚಿತ್ರ ‘ಎಲ್ಲಿಗೆ ಪಯಣ ಯಾವುದೋ ದಾರಿ’. ಈ ಸಿನಿಮಾದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ಅವರು ರಿಲೀಸ್ ಮಾಡಿದ್ದಾರೆ. ಬಿಗ್ ಬಾಸ್ ಶೋ ಹಾಗೂ ಸಿನಿಮಾ ಒತ್ತಡಗಳ ನಡುವೆಯೂ ಪ್ರೀತಿಯಿಂದ ಆಗಮಿಸಿದ ಸುದೀಪ್, ಕಾಶೀನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಪುತ್ರ ಅಭಿಮನ್ಯು ಕಾಶೀನಾಥ್‌ಗೆ ಶುಭ ಕೋರುತ್ತಾ, ಟ್ರೈಲರ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಅಕ್ಟೋಬರ್ 25ರಂದು ತೆರೆಗಾಣಲಿದೆ.
Advertisement
ಕನ್ನಡ ಚಿತ್ರರಂಗ ಎಂದಿಗೂ ಕಾಶಿನಾಥ್ ಅವರ ಕೊಡುಗೆಗಳನ್ನು, ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯುಗೆ ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು ಎಂದಿರುವ ಸುದೀಪ್, ಈ ಟ್ರೈಲರ್‌ನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿಯನ್ನೂ ಮೆಚ್ಚಿಕೊಂಡಿದ್ದಾರೆ. ಈ ಟ್ರೈಲರ್ ಚಿತ್ರದ ಕುರಿತು ಭರವಸೆ ಮೂಡಿಸಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ ಎಸ್. ಸೂರ್ಯ ಹಾಗೂ ತಂಡದ ಪರಿಶ್ರಮಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಖುದ್ದು ತಾವೇ ಈ ಸಿನಿಮಾಕ್ಕಾಗಿ ಹಾಡಿರುವ ಹಾಡಿನ ಕುರಿತು ಮಾತಾಡಿದ್ದಾರೆ. ಒಟ್ಟಾರೆಯಾಗಿ ಈ ಟ್ರೈಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ ಎಂದಿರುವ ಕಿಚ್ಚ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
Advertisement
Advertisement
ನಟ ಅಭಿಮನ್ಯು ಆರಂಭಿಕವಾಗಿ ಈ ಸಿನಿಮಾ ಸಾಗಿ ಬಂದ ರೀತಿಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ನಿರ್ದೇಶಕರ ಸೂಕ್ಷ್ಮವಂತಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ಆರಂಭದಲ್ಲಿ ಕಥಾ ಎಳೆ ಹೇಳಿದಂತೆಯೇ ಚೆಂದಗೆ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಹಂತದಲ್ಲಿ ಸಿನಿಮಾದ ಕೆಲ ಪಾತ್ರಗಳ ಚಹರೆಗಳನ್ನು ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಆತಿನ್ ಅವರು ಈ ಸಿನಿಮಾ ನಿರ್ಮಾಣದ ಅನುಭವಗಳ ಬಗ್ಗೆ ಮಾತಾಡುತ್ತಲೇ, ಇಂಥಾ ಚೆಂದದ ಚಿತ್ರ ಮಾಡಲು ಸಾಥ್ ಕೊಟ್ಟವರನ್ನೆಲ್ಲ ಸ್ಮರಿಸಿದ್ದಾರೆ.
Advertisement
ನಾಯಕಿ ಸ್ಫೂರ್ತಿ ಉಡಿಮನೆ ಈ ಸಮಾರಂಭದಲ್ಲಿ ಹಾಜರಿದ್ದ, ತಾನು ನಾಯಕಿಯಾಗಿ ಆಯ್ಕೆಯಾದ ಕುರಿತಾಗಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತನ್ನ ಪಾತ್ರದ ಒಂದಷ್ಟು ಸುಳಿವುಗಳನ್ನೂ ಬಿಟ್ಟು ಕೊಟ್ಟಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿಜಯಶ್ರೀ ಕಲಬುರ್ಗಿ ಹಾಜರಿದ್ದು ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್. ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.