Connect with us

Cricket

ಬುಮ್ರಾ ‘ಬೇಬಿ ಬೌಲರ್’ ಎಂದು ನಗೆಪಾಟಲಿಗೀಡಾದ ಪಾಕ್ ಮಾಜಿ ಆಟಗಾರ

Published

on

ನವದೆಹಲಿ: ಟೀಂ ಇಂಡಿಯಾ ವೇಗಿ, ಏಕದಿನದಲ್ಲಿ ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ‘ಬೇಬಿ ಬೌಲರ್’ ಎಂದು ಹೇಳಿಕೆ ನೀಡಿದ್ದ ಪಾಕ್ ಮಾಜಿ ಆಟಗಾರ ಅಬ್ದುಲ್ ರಜಾಕ್‍ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು, ಅಬ್ದುಲ್ ರಜಾಕ್‍ರ ಕೆಲ ಮಾಹಿತಿಯನ್ನು ಹಂಚಿಕೊಂಡಿರುವ ಟ್ವಿಟ್ಟಿಗರು ರಜಾಕ್‍ರ ಕಾಲೆಳೆದಿದ್ದಾರೆ.

ಪಾಕ್‍ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಅಬ್ದುಲ್ ರಜಾಕ್, ನಾನು ಈಗ ಏನಾದರು ಕ್ರಿಕೆಟ್ ಆಡುತ್ತಿದ್ದರೆ ಸುಲಭವಾಗಿ ಬೇಬಿ ಬೌಲರ್ ಬುಮ್ರಾ ಎಸೆತವನ್ನು ದಂಡಿಸುತ್ತಿದೆ ಎಂದಿದ್ದರು.

ವಿಶ್ವ ಹಲವು ಶ್ರೇಷ್ಠ ಆಟಗಾರರು ಬುಮ್ರಾ ಬೌಲಿಂಗ್ ಕುರಿತು ಮೆಚ್ಚುಗೆ ಸೂಚಿಸಿದ್ದರು ಕೂಡ ರಜಾಕ್ ಮಾತ್ರ ವ್ಯಂಗ್ಯವಾಗಿ ಮಾತನಾಡಿದ್ದರು. ನನ್ನ ವೃತ್ತಿ ಜೀವನದಲ್ಲಿ ವಿಶ್ವದ ಶ್ರೇಷ್ಠ ಬೌಲರ್ ಗಳನ್ನು ಎದುರಿಸಿದ್ದೇನೆ. ವಸೀಂ ಅಕ್ರಂ, ಅಖ್ತರ್, ಮೆಗ್ರಾತ್ ರಂತಹ ಸ್ಟಾರ್ ಬೌಲರ್ ಗಳ ಎದುರು ಆಡಿದ್ದೇನೆ. ಹೀಗಾಗಿ ನನಗೆ ಬುಮ್ರಾ ವಿರುದ್ಧ ಬ್ಯಾಟ್ ಮಾಡುವುದು ಕಷ್ಟ ಎನಿಸುವುದಿಲ್ಲ. ಇವರಿಗೆ ಹೋಲಿಸಿದರೆ ಬುಮ್ರಾ ನನ್ನ ಎದುರು ಇನ್ನು ಬೇಬಿ ಬೌಲರ್ ಎಂದು ರಜಾಕ್ ಸಂದರ್ಶನದಲ್ಲಿ ಹೇಳಿದ್ದರು.

ರಜಾಕ್ ಅವರ ಈ ಕಾಮೆಂಟ್ ಗಳಿಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಮೆಗ್ರಾತ್ ವಿರುದ್ಧ ರಜಾಕ್‍ರ ಬ್ಯಾಟಿಂಗ್ ಸರಾಸರಿಯನ್ನು ಟ್ವೀಟ್ ಮಾಡಿರುವ ಟ್ವಿಟ್ಟಿಗರೊಬ್ಬರು ಅವರ ಕಾಲೆಳೆದಿದ್ದಾರೆ.

ರಜಾಕ್ ಈ ಹಿಂದೆಯೂ ಕೂಡ ಇಂತಹದ್ದೇ ಹೇಳಿಕೆಯನ್ನು ನೀಡಿದ್ದರು. ತಾವು ಬ್ಯಾಟಿಂಗ್ ದಿಗ್ಗಜರಾದ ಸಚಿನ್, ಸೆಹ್ವಾಗ್ ಅವರಿಗಿಂತಲೂ ಶ್ರೇಷ್ಠ ಆಟಗಾರ ಎಂದು ಹೇಳಿದ್ದರು. ಈ ಮಾತನ್ನು ಟ್ವಿಟ್ಟಿಗರು ಪ್ರಸ್ತಾಪಿಸಿ ವ್ಯಂಗ್ಯ ಮಾಡಿದ್ದಾರೆ. ಅಂದಹಾಗೇ ಅಬ್ದುಲ್ ರಜಾಕ್ ಪಾಕ್ ಪರ 1999ರಿಂದ 2013ರ ವರೆಗೂ ಒಟ್ಟು 265 ಏಕದಿನ, 46 ಟೆಸ್ಟ್ ಹಾಗೂ 32 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಬುಮ್ರಾ, ಟೆಸ್ಟ್ ಮಾದರಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ವಿಶ್ವದ ಶ್ರೇಷ್ಠ ಡೇತ್ ಓವರ್ ಬೌಲರ್ ಎಂಬ ಖ್ಯಾತಿಯನ್ನು 26 ವರ್ಷದ ಬುಮ್ರಾ ಪಡೆದಿದ್ದಾರೆ.

Click to comment

Leave a Reply

Your email address will not be published. Required fields are marked *