ಬಡರೋಗಿಗಳು, ಅನಾಥರಿಗೆ ಆಶ್ರಯದಾತ ಹಾವೇರಿಯ ಅಬ್ದುಲ್ ಖಾದರ್

Public TV
1 Min Read
vlcsnap 2017 06 09 16h08m41s204

ಹಾವೇರಿ: ಅಪಘಾತಗಳಾದಾಗ ಜನ ಸಹಾಯಕ್ಕೆ ಬರದೆ ಮಾನವೀಯತೆ ಮರೆತುಬಿಟ್ಟಿದ್ದಾರೆ ಅನ್ನೋ ಸುದ್ದಿಯನ್ನೇ ನೋಡಿದ್ವಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾವೇರಿಯ ಅಬ್ದುಲ್ ಖಾದರ್ ಅವ್ರು ಇದನ್ನ ಸುಳ್ಳು ಮಾಡಿದ್ದಾರೆ.

ಮಾನವೀಯತೆಗೆ ಮಿಡಿಯುವ ವ್ಯಕ್ತಿ ಅಬ್ದುಲ್ ಖಾದರ್ ಧಾರವಾಡ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರು ಹಾವೇರಿ ನಗರದಲ್ಲಿ ನೆಲೆಸಿದ್ದಾರೆ. ಗ್ಯಾರೇಜ್ ಇಟ್ಟುಕೊಂಡು ಜೀವನ ಸಾಗಿಸ್ತಿರೋ ಇವರ ಹೃದಯ ವೈಶಾಲ್ಯತೆ ದೊಡ್ಡದು. ದುಡಿದ ಹಣದಲ್ಲಿ ಶೇಕಡಾ 20ರಷ್ಟನ್ನ ಜಿಲ್ಲಾಸ್ಪತ್ರೆಗೆ ಬರೋ ಬಡರೋಗಿಗಳ ಸೇವೆ ಮೀಸಲಿಟ್ಟಿದ್ದಾರೆ. ಹೀಗೆ, ಕಳೆದ ಐದಾರು ವರ್ಷಗಳಿಂದ ತಮ್ಮ ಸೇವೆ ನಡೆಸ್ತಿದ್ದಾರೆ. ಚಿಕಿತ್ಸೆ ಜೊತೆಗೆ ಮನೆಯಿಂದ ಊಟ ತಂದು ಊಟ ಮಾಡಿಸ್ತಾರೆ. ರಸ್ತೆಯಲ್ಲಿ ಅಪಘಾತವಾದ ಅಪರಿಚಿತ ವ್ಯಕ್ತಿಗಳನ್ನ ತಾವೇ ಕರೆದೊಯ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸ್ತಿದ್ದಾರೆ.

ಪ್ರತಿ ಮೂರು ತಿಂಗಳಿಗೊಮ್ಮೆ ಬಡ ರೋಗಿಗಳಿಗೆ ಉಚಿತವಾಗಿ ರಕ್ತದಾನ ಮಾಡ್ತಾರೆ. ಬಡರೋಗಿಗಳು ಹಾಗೂ ಅನಾಥ ಇವರನ್ನ ಅದ್ಯಾವ ಜನ್ಮದ ನಂಟೋ ಅಂತ ಭಾವುಕರಾಗ್ತಾರೆ.

ಜಿಲ್ಲಾಸ್ಪತ್ರೆಯ ವೈದ್ಯರ ಸಹಕಾರದೊಂದಿಗೆ ಅನಾಥ ಶವಗಳ ಅಂತ್ಯಕ್ರಿಯೆ ಮಾಡೋ ಅಬ್ದುಲ್ ಅವ್ರಂತ ಸಮಾಜಸೇವಕ ಇರೋದು ಹೆಮ್ಮೆ ಅಂತ ಜಿಲ್ಲಾಸ್ಪತ್ರೆ ವೈದ್ಯರು ಹೇಳ್ತಾರೆ.

https://www.youtube.com/watch?v=RCbSR-E5H_0

Share This Article
Leave a Comment

Leave a Reply

Your email address will not be published. Required fields are marked *