ಮಂಗಳೂರು: ಜಿಲ್ಲೆಯ ಫಾಸ್ಟ್ ಫುಡ್ ವ್ಯಾಪಾರಿ ಅಬ್ದುಲ್ ಬಶೀರ್ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಬಂಧನವಾಗಿದೆ.
ಶ್ರೀಜಿತ್ ಪಿ.ಕೆ (25), ಕಿಶನ್ ಪೂಜಾರಿ (21), ಧನುಷ್ ಪೂಜಾರಿ (22), ಸಂದೇಶ್ ಕೋಟ್ಯಾನ್ (22) ಬಂಧಿತ ಆರೋಪಿಗಳು. ಶ್ರೀಜಿತ್, ಕಾಸರಗೋಡಿನ ಉಪ್ಪಳದ ಮಂಗಲ್ಪಾಡಿ ನಿವಾಸಿ, ಸಂದೇಶ್ ಮಂಜೇಶ್ವರದ ಕುಂಜತ್ತೂರು ನಿವಾಸಿ, ಕಿಶನ್ ಮತ್ತು ಧನುಷ್ ಮಂಗಳೂರಿನ ಪಡೀಲ್ ನಿವಾಸಿಗಳು ಎಂದು ತಿಳಿದು ಬಂದಿದೆ.
Advertisement
Advertisement
ಮಂಗಳೂರಿನ ಕಂಕನಾಡಿ ಗರೋಡಿ ಜಾತ್ರೆಗೆ ಬಂದಿದ್ದ ಯುವಕರ ತಂಡ ದೀಪಕ್ ರಾವ್ ಹತ್ಯೆಯಾದ ದಿನ ಎಜೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಹಿಂದೂ ಯುವಕನ ಕೊಲೆಯಾಗಿದೆ ಎಂದು ಆಕ್ರೋಶಗೊಂಡ ಈ ಯುವಕರು ಸೇಡು ತೀರಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದೀಪಕ್ ಹತ್ಯೆಗೆ ರಿವೇಂಜ್ ಆಗಿ ಕೃತ್ಯ ಬಷೀರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮೀಷನರ್ ಹೇಳಿದರು.
Advertisement
ಬಷೀರ್ ಗೂ ಬಂಧಿತ ಆರೋಪಿಗಳಿಗೂ ಸಂಬಂಧವಿಲ್ಲ. ಮೇಲ್ನೋಟಕ್ಕೆ ಹಳೇ ವೈಷಮ್ಯ ಕಾಣಿಸುತ್ತಿಲ್ಲ. ಮುಂದೆ ತನಿಖೆಯಲ್ಲಿ ಎಲ್ಲಾ ಸತ್ಯಗಳು ಬಹಿರಂಗ ಆಗುತ್ತದೆ ಎಂದು ಇದೇ ವೇಳೆ ಹೇಳಿದ್ದಾರೆ. ಜ.3 ರಂದು ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಅಬ್ದುಲ್ ಬಶೀರ್ ಚಿಕಿತ್ಸೆಗೆ ಸ್ಪಂದಿಸ್ತಾಯಿದ್ದಾರೆ, ಅಬ್ದುಲ್ ಬಶೀರ್ ದೇಹ ಸ್ಥಿತಿ ಸುಧಾರಿಸಿದೆ ಎಂದು ಸ್ಪಷ್ಟಪಡಿಸಿದರು.
Advertisement
ಆರಂಭದಲ್ಲಿ ಇದ್ದಂತಹ ವಿಷಮ ಸ್ಥಿತಿ ಈಗ ಮಂಗಳೂರಲ್ಲಿ ಇಲ್ಲ ಎಂದು ಪೊಲೀಸ್ ಕಮೀಷನರ್ ಹೇಳಿದರು. ಇದನ್ನೂ ಓದಿ: ದೀಪಕ್ ಹತ್ಯೆ ನಡೆದ ರಾತ್ರಿ ಮಂಗ್ಳೂರಿನಲ್ಲಿ ವ್ಯಾಪಾರಿಯ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ
https://www.youtube.com/watch?v=prf8LAzRcus
https://www.youtube.com/watch?v=XIln_78eJlQ
https://www.youtube.com/watch?v=nqZ3ZShX1q0